ಬ್ಯಾಟ್ ಹಿಡಿದು ಬೌಂಡರಿ, ಸಿಕ್ಸರ್ ಅಭ್ಯಾಸ, ಕ್ರಿಕೆಟಿಂಗ್ ಶಾಟ್ಸ್ ಅಭ್ಯಾಸದ ನೆಪದಲ್ಲಿ ಬೈಕ್ ಕಳ್ಳತನಕ್ಕೆ ಯತ್ನ: ಸಿಸಿಟಿವಿ‌ ನೋಡಿ‌ ಅಲ್ಲಿಂದ ಪರಾರಿಯಾದ ಕಳ್ಳ: ಅಸಲಿಗೆ ನೆಟ್ಟಿಗರು ಈ ವಿಡಿಯೋ‌ ನೋಡಿ ಏನಂದ್ರು..?

ಅಪರಾಧ ಕೃತ್ಯಗಳಲ್ಲಿ‌ ಭಾಗಿಯಾಗಲೂ ಹೊಸ ಹೊಸ ಮಾರ್ಗ, ತಂತ್ರಜ್ಞಾನ, ಐಡಿಯಾ, ಕಸರತ್ತು, ಆಕ್ಟಿಂಗ್ ಸೇರಿದಂತೆ ತರಹೇವಾರಿ ಬುದ್ದಿ ಉಪಯೋಗಿಸಲಾಗುತ್ತದೆ.

ಅದೇ ರೀತಿ ಇಲ್ಲೊಬ್ಬ ಆಸಾಮಿ ಬೈಕ್ ಕಳ್ಳತನಕ್ಕೆ ಯಾರೂ ಊಹಿಸಲು ಸಾಧ್ಯವಾಗದ ರೀತಿ ಆ್ಯಕ್ಚಿಂಗ್ ಜೊತೆಗೆ ಐಡಿಯಾ ಉಪಯೋಗಿಸಿದ್ದಾನೆ. ಆದರೆ, ಇನ್ನೇನು ಬೈಕ್ ಕಳ್ಳತನ ಮಾಡಬೇಕು ಅನ್ನುವಷ್ಟರಲ್ಲೆ ಸಿಸಿಟಿವಿಯಿಂದ ಎಲ್ಲಾ ಪ್ರಯತ್ನ ವಿಫಲಗೊಂಡಿದ್ದರಿಂದ ಬ್ಯಾಟ್ ನಿಂದ ಮುಖ‌ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕಳ್ಳನ‌ ಈ ಎಲ್ಲಾ ವೈಯ್ಯಾರಗಳು ಸಿಸಿಟಿಯಲ್ಲಿ ರೇಕಾರ್ಡ್ ಆಗಿದ್ದು, ಸದ್ಯ ವಿಡಿಯೋ ಭಾರಿ ವೈರಲ್ ಆಗಿದೆ.

ಮೊದಮೊದಲು ಈ‌ ವಿಡಿಯೋ‌ ನೋಡಿದಾಗ ಆ ವ್ಯಕ್ತಿ ಬ್ಯಾಟ್ ಹಿಡಿದು ಬೌಂಡರಿ, ಸಿಕ್ಸರ್ ಅಭ್ಯಾಸ, ಕ್ರಿಕೆಟಿಂಗ್ ಶಾಟ್ಸ್ ಅಭ್ಯಾಸ ಮಾಡುತ್ತಿರುವುದು ನೋಡಿದರೆ ಮುಂದೊಂದು ದಿನ ಉತ್ತಮ ಕ್ರಿಕೆಟಿಗನಾಗುತ್ತಾನೆ ಅನ್ನೋ ಆಲೋಚನೆಗಳು ಎಲ್ಲರ ಮನಸ್ಸಿನಲ್ಲಿ ಮೂಡುವುದು ಸಹಜ.

ಈತನ ಕ್ರಿಕೆಟ್ ಆಸಕ್ತಿಯನ್ನು ಕೊಂಡಾಡಿದರೂ ಅಚ್ಚರಿ ಇಲ್ಲ. ಆದರೆ, ಇವೆಲ್ಲವೂ ಕೇವಲ ನಟನೆಯಾಗಿತ್ತು. ಅಸಲಿಗ ಈತ ಬೈಕ್ ಕಳ್ಳತನಕ್ಕೆ ಬಂದಿದ್ದಾನೆ. ಅದೇ ಕ್ರಿಕೆಟ್ ಆಟದಲ್ಲೇ ಹ್ಯಾಂಡಲ್ ಲಾಕ್ ಚೆಕ್ ಮಾಡಿದ್ದಾನೆ. ಇನ್ನೇನು ಬೈಕ್ ಕಳ್ಳತನ ಮಾಡಬೇಕು ಅನ್ನುವಷ್ಟರಲ್ಲಿ ಸಿಸಿಟಿವಿ ಕ್ಯಾಮೆರಾ ನೋಡಿ ಅರ್ಧಕ್ಕೆ ಕೈಬಿಟ್ಟ ಸಿಸಿಟಿವಿಗೆ ತನ್ನ ಮುಖ ಕಾಣಿಸಬಾರದು ಎಂದು ಬ್ಯಾಟ್ ನಿಂದ ಮುಖ‌ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು  ಕಮೆಂಟ್ ಸಹ ಮಾಡಿದ್ದಾರೆ. ಇದೇ ವೇಳೆ ಕೆಲವರು ಇದು ನಕಲಿ ಎಂದು ಪ್ರತಿಕ್ರಿಯಿಸಿದ್ದಾರೆ. ವೈರಲ್ ವಿಡಿಯೋಗಾಗಿ ಮಾಡಿದ ನಕಲಿ ನಾಟಕ ಎಂದಿದ್ದಾರೆ. ನಕಲಿ ಮಾಡುವಾಗಲು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಈ ರೀತಿ ಕಪಟ ವಿಡಿಯೋಗಳಿಗೆ ಮಾರುಹೋಗಬೇಡಿ ಎಂದು ಎಚ್ಚರಿಸಿದ್ದಾರೆ. ಮತ್ತೆ ಕೆಲವರು ಕಳಪೆ ನಾಯಕತ್ವ ಎಂದು ಕಮೆಂಟ್ ಮಾಡಿದ್ದಾರೆ. ಬ್ಯಾಟಿಂಗ್ ಕಳ್ಳ ಎಂದು ಹೆಸರಿಟ್ಟಿದ್ದಾರೆ.

Leave a Reply

Your email address will not be published. Required fields are marked *