ಚೆನ್ನೈ: ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ 21 ರನ್‌ಗಳ ಭರ್ಜರಿ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು, ಮೊದಲ ವಿಕೆಟ್ ನಷ್ಟಕ್ಕೆ 68 ರನ್ ಗಳ ಭರ್ಜರಿ ಆರಂಭ ಪಡೆದ ಆಸ್ಟ್ರೇಲಿಯ ಹೆಡ್(33) ಹಾಗೂ ಮಿಚೆಲ್ ಮಾಷ್ (47) ರನ್ ಗಳಿಸಿದರು, ಭಾರತ ತಂಡಕ್ಕೆ ಉತ್ತಮ ಬ್ರೇಕ್ ಥ್ರೋ ಕೊಟ್ಟ ಹಾರ್ದಿಕ್ ಪಾಂಡ್ಯ ಮೊದಲ ಎರಡು ವಿಕೆಟ್ ಪಡೆದರು ನಂತರ ಬಂದ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಬಲಿ ಪಡೆದರು.
ನಂತರ ವಾರ್ನರ್, ಲಬುಷನಿಗೆ, ಹಾಗೂ ಅಲೆಕ್ಸ್ ಹ್ಯಾರಿ, ಸ್ಟೋನಿಸ್ ಹಾಗೂ ಅಬ್ಬಾಟ್ ಉಪಯುಕ್ತ ಕಾಣಿಕೆ ನೀಡಿದರು, ಇದರ ಅನುಕೂಲದಿಂದಾಗಿ 269 ರನ್ ಗಳಿಸಿದರು, ಭಾರತದ ಪರವಾಗಿ ಕುಲದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್ ಪಡೆದು ಗಮನ ಸೆಳೆದರು.
270 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಜೋಡಿ ಉತ್ತಮ ರನ್ ಗಳಿಸಿ ಭರವಸೆ ಮೂಡಿಸಿದ್ದರು, ರೋಹಿತ್ ಶರ್ಮ (30), ಶುಭ್ ಮನ್ ಗಿಲ್ (37) ರನ್‌ಗಳಿಸಿ ಮೊದಲ ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದರು, ನಂತರ ಬಂದ ವಿರಾಟ್ ಕೊಹ್ಲಿ (54)ರನ್ ಗಳಿಸಿ ಭರವಸೆ ಮೂಡಿಸಿದ್ದರು.
ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಾದ ಹಾರ್ದಿಕ್ ಪಾಂಡ್ಯ (40) ಹಾಗೂ ಕೆ. ಎಲ್. ರಾಹುಲ್ (32) ರನ್ ಗಳಿಸಿದರೂ ನಂತರ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ 248 ರನ್ ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡರು.
ಆಸ್ಟ್ರೇಲಿಯಾ ಪರವಾಗಿ ಆಡಂ ಜಂಪಾ 4 ವಿಕೆಟ್ ಹಾಗೂ ಆಗರ್ 2 ವಿಕೆಟ್ ಪಡೆದರು, ಸರಣಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ ಮಿಂಚಿದ ಮಿಚೆಲ್ ಸ್ಟಾಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ ಆಡಂ ಜಂಪಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.