ಬೈರೇಗೌಡರ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿ, ವಿರೋಧಿಗಳಿಗೆ ಇದೇ ಉತ್ತರ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ದಿವಂಗತ ಸಿ.ಬೈರೇಗೌಡರ ಹಾದಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಗುರಿಯಾಗಿದೆ ವಿರೋಧಿಗಳಿಗೆ ಅಭಿವೃದ್ಧಿಯೇ ಉತ್ತರವಾಗಲಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು

ತಾಲೂಕಿನ ಕಾಮಾಂಡಹಳ್ಳಿ ಕೆರೆಯ 3 ಕೋಟಿ, ಪರ್ಜೇನಹಳ್ಳಿ ಕೆರೆಯ 2.5 ಕೋಟಿ ಹಾಗೂ ಕುರ್ಕಿ ಕೆರೆಯ 4 ಕೋಟಿ ಸೇರಿದಂತೆ ಒಟ್ಟು 9.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಮುಖ್ಯ ಉದ್ದೇಶವೇ ಅಭಿವೃದ್ಧಿಯಾಗಿದೆ ಕ್ಷೇತ್ರದ ಜನರ ದೂರ ದೃಷ್ಟಿ ಇಟ್ಟುಕೊಂಡು ಅಂತರ್ಜಲ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ಸಮರ್ಪಕವಾಗಿ
ರಸ್ತೆ ಮಾಡಲಾಗುತ್ತದೆ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಹೋಗುವುದಿಲ್ಲ ಏನೇ ಅಭಿವೃದ್ಧಿ ಕೆಲಸ ಆಗಬೇಕಾದರೂ ನಮ್ಮ ಗಮನಕ್ಕೆ ತಂದರೆ ಮಾಡಲಾಗುವುದೆಂದು ಆಶ್ವಾಸನೆ ನೀಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ತಾಲ್ಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿದ್ದು,ಇದೇ ರೀತಿ ಕೋಲಾರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲನೆ ನಡೆಸುವ ಜವಾಬ್ದಾರಿ ಗ್ರಾಮಸ್ಥರೇ ವಹಿಸಬೇಕು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್ ಕುಮಾರ್, ಮುಖಂಡರಾದ ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲಗೌಡ, ಖಾಜಿಕಲ್ಲಹಳ್ಳಿ ಮುನಿರಾಜು, ನಾಗನಾಳ ಸೋಮಣ್ಣ, ಅಂಕತಟ್ಟಿ ಬಾಬು, ನರಸಾಪುರ ಕೃಷ್ಣಪ್ಪ, ಛತ್ರಕೋಡಿಹಳ್ಳಿ ಮಂಜುನಾಥ್, ಮೈಲಾಂಡಹಳ್ಳಿ ಮುರಳಿ, ಗೋವಿಂದಪ್ಪ, ಉರಟಾಗ್ರಹಾರ ಚೌಡರೆಡ್ಡಿ, ಜಾಲಿ ಬಾನು, ನಾಗೇಶ್, ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!