ರಾಷ್ಟ್ರೀಯ ಹೆದ್ದಾರಿ–648ರ ಕೂಗೋನಹಳ್ಳಿ ಕಾಲೊನಿ ಸಮೀಪ ಬುಧವಾರ ಖಾಸಗಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.
ಚುಂಚೇಗೌಡನಹೊಸಹಳ್ಳಿ ಗ್ರಾಮದ ನಿವಾಸಿ ಮುನಿರಾಜು(43) ಮೃತರು.
ಮೃತ ಮುನಿರಾಜು ಬುಧವಾರ ಬೆಳಗ್ಗೆ ಬೈಕ್‌ನಲ್ಲಿ ದೊಡ್ಡಬೆಳವಂಗಲಕ್ಕೆ ಬಂದು ಚುಂಚೇಗೌಡನಹೊಸಹಳ್ಳಿಗೆ ತೆರಳುವ ವೇಳೆ ಕೂಗೋನಹಳ್ಳಿ ಕಾಲೋನಿ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುನಿರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.