ನಗರದ ರೈಲ್ವೆ ನಿಲ್ದಾಣ ಬಳಿ ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ಸವಾರನಿಗೆ ಟಿಪ್ಪರ್ ಲಾಕಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ಚಕ್ರದಡಿ ಸಿಲುಕಿದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರದ ರೈಲ್ವೆ ಸ್ಟೇಷನ್ ನಿವಾಸಿ ಕುಶಾಲ್ ಕುಮಾರ್ (20) ಸ್ಥಳದಲ್ಲೇ ಮೃತಪಟ್ಟ ಯುವಕ.
ಟಿಪ್ಪರ್ ಲಾರಿ ಮತ್ತು ಬೈಕ್ ಸೇರಿ ಎರಡೂ ವಾಹನಗಳು ನಗರದ ರೈಲ್ವೆ ನಿಲ್ದಾಣದಿಂದ ರಘನಾಥಪುರದ ಕಡೆಗೆ ಹೊರಟಿದ್ದವು, ಈ ವೇಳೆ ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡದಿದೆ, ಡಿಕ್ಕಿ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ, ಸವಾರನ ಮೇಲೆ ಲಾರಿಯ ಹಿಂಬದಿಯ ಚಕ್ರ ಹರಿದ ಪರಿಣಾಮ ಕುಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೂಡಲೇ ನಗರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.