ಬೈಕ್ ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ತಾಲೂಕಿನ ಅರಳು ಮಲ್ಲಿಗೆ ಕೆರೆ ಏರಿ ಮೇಲೆ ನಡೆದಿದೆ.
ಲೋಕೇಶ್ (28) ಮೃತಪಟ್ಟ ಬೈಕ್ ಸವಾರ ಎನ್ನಲಾಗಿದೆ.
ಲಾರಿ ಚಾಲಕನ ಅಜಾಗರೂಕತೆ ಹಾಗೂ ನಿರ್ಲಕ್ಷತೆ ಕಾರಣದಿಂದ ಮೊದಲು ಆಲಹಳ್ಳಿ ಬಳಿ ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಲು ವೇಗವಾಗಿ ಬಂದು ಕೆರೆ ಏರಿ ಮೇಲೆ ಬೈಕ್ ಗೆ ಡಿಕ್ಕಿ ಹೊಡೆಯಲಾಗಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಗೆ ಹೊಡೆದರೂ ಸಹ ಅಲ್ಲಿ ಏನಾಗಿದೆ ಎಂದು ನೋಡದೆ ಲಾರಿ ಚಾಲಕ ತನ್ನ ಪಾಡಿಗೆ ತಾನು ಲಾರಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಘಟನೆ ಕಂಡ ಮಧುರೆ ಹೋಬಳಿ ವಿಜಯವಾಣಿ ಪತ್ರಿಕೆ ವಿತರಕ ಹಾಗೂ ವರದಿಗಾರ ಚೇತನ್ ರವರು ಕೂಡಲೇ ಲಾರಿಯನ್ನು ಬೆನ್ನತ್ತಿ ನೆಲಮಂಗಲದ ಬಿನ್ನಮಂಗಲದ ಬಳಿ ಲಾರಿ ಸಮೇತ ಚಾಲಕನನ್ನ ಹಿಡಿದು ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…..