ಬೈಕ್ -ಕೋಳಿ ಸಾಗಿಸುವ ಗೂಡ್ಸ್ ವಾಹನ ನಡುವೆ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು

ಬೈಕ್ -ಕೋಳಿ ಸಾಗಿಸುವ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನ ಡಿಕ್ಕಿ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಬಾಶೆಟ್ಟಿಹಳ್ಳಿ ಬಳಿ ನಡೆದಿದೆ.

ಪ್ರವೀಣ್ ಮೃತ ದುರ್ದೈವಿ. ಮೃತ ಪ್ರವೀಣ್ ಮೂಲತಹ ಮಧುಗಿರಿಯ ಸದ್ದುಗಂಟೆ ಗ್ರಾಮದವನು. ಬಾಶೆಟ್ಟಿಹಳ್ಳಿಗೆ ಬಂದು ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ.  ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!