ಕೋಲಾರ: ಬೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಗಾಳಿ ಮಳೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಸ್ಪಂಧಿಸುವ ಜೊತೆಗೆ ಇಲಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಇಂಧನ ಸಚಿವರನ್ನು ಒತ್ತಾಯಿಸಿದರು.
ಗಡಿಭಾಗದ ಕಾಮಸಮುದ್ರ ಉಪ ವಿದ್ಯುತ್ ಕೇಂದ್ರದ ಮುಂದೆ ಮಾತನಾಡಿದ ರವರು ಜಿಲ್ಲಾಧ್ಯಂತ ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಸಮರ್ಪಕವಾಗಿ ವಿದ್ಯುತ್ ಸಮಸ್ಯೆ ಸೇವೆ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದರೂ ಸಮಸ್ಯೆಯಲ್ಲಿ ಗಂಭೀರವಾಗಿ ಪರಿಗಣಿಸುವಲ್ಲಿ ಇಂಧನ ಸಚಿವರು ವಿಫಲವಾಗಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿದೆ ಟ್ರಾರ್ನ್ಸ್ಫಾರಂನಿಂದ ಹಿಡಿದು ಆಯಿಲ್ ದಂದೆ, ಜೊತೆಗೆ ಹಳೆ ಕಂಬ ತಂತಿ ಪರಿವರ್ತಕಗಳನ್ನು ಮಾಹಿತಿ ಇಲ್ಲದೆ ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ಹಗಲು ದರೋಡೆ ಮಾಡುತ್ತಿರುವ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ವಿಲ್ಲವೆ ಏಕೆ ಎಂದು ಪ್ರಶ್ನೆ ಮಾಡಿದರು.
ಮಳೆಗಾಲ ಆರಂಭದೊಂದಿಗೆ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯೆಯವಾಗುತ್ತಿದೆ. ಆಗಾಗಿ ವಿದ್ಯುತ್ ಕಡಿತವಾಗುತ್ತಿದ್ದು, ಗಾಳಿ ಮಳೆಯ ಕಾರಣಕ್ಕೆ ಬೆಸ್ಕಾಂಗೆ ನೂರಾರು ದೂರುಗಳು ರೈತರು ಹಾಗೂ ಜನ ಸಾಮಾನ್ಯರಿಂದ ಬರುತ್ತಿದ್ದರೂ ಸಮರ್ಪಕವಾಗಿ ನಿರ್ವಹಿಸಲಾಗದೆ ಗಾಳಿ ಮಳೆಗೆ ಬಿದ್ದಿರುವ ಕಂಬಗಳು ಸುಟ್ಟಿರುವ ಟ್ರಾರ್ನ್ಸ್ಫಾರಂಗಳು ಹಾಗೂ ತುಂಡಾಗಿರುವ ತಂತಿಗಳು ಮರಗಡಿಗಳನ್ನು ತೆರವುಗೊಳಿಸಲು ಅರಸಾಹಸ ಪಡುವ ಜೊತೆಗೆ ಸಿಬ್ಬಂದಿಗೆ ಒತ್ತಡ ಹೆಚ್ಚಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದರೂ, ಸರ್ಕಾರಕ್ಕೆ ಕನಿಕರವಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್ ಮಾತನಾಡಿ ಅತಿಹೆಚ್ಚು ಅರಣ್ಯವಿರುವ ಗಡಿಭಾಗದಲ್ಲಿರುವ ಕಾಮಸಮುದ್ರ ವ್ಯಾಪ್ತಿಯಲ್ಲಿ ಮಳೆ ಬಂದರೆ ಮರಗಳ ಕೊಂಬೆಗಳು ಕಂಬಗಳ ಮೇಲೆ ಬಿದ್ದು ತಂತಿಗಳು ತುಂಡಾಗಿ ಟ್ರಾರ್ನ್ಸ್ಫಾರಂಗಳು ಸುಟ್ಟುಹೋಗಿ ಅದನ್ನು ತೆರವುಗೊಳಿಸಲು ಮೂರು ನಾಲ್ಕು ದಿನ ಬೇಕಾಗುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ಬೆಳೆ ಒಂದು ಕಡೆ ನಾಶವಾದರೆ ಮತ್ತೊಂದು ಕೊಡೆ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಇರುವುದರಿಂದ ಜನ ಸಾಮಾನ್ಯರು ಇಲಾಖೆಗೆ ಇಡೀ ಶಾಪ ಹಾಕುವಂತಾಗಿದೆ.
ಸಿಬ್ಬಂದಿ ಕೊರತೆಯ ಕಾರಣಕ್ಕೆ ಹಾಲಿ ನೌಕರರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಪರಿಸ್ತಿತಿ ನಿಬಾಯಿಸಲಾಗುತ್ತಿದೆ. ಲೈನ್ ಮ್ಯಾನ್ ಮೀಟರ್ ರೀಡರ್, ಹಾಗೂ ಇಂಜಿನಿಯರ್‌ಗಳಿಂದ ನಿಗಧಿತ ಸಮಯಕ್ಕಿಂತ ಹೆಚ್ಚಿನ ಅವಧಿಯೊಳಗೆ ಕೆಲಸ ಮಾಡಲಾಗುತ್ತಿದೆ. ಇದರಿಂದ ಹಾಲಿ ಸಿಬ್ಬಂದಿ ಮೇಲೆ ಕಾರ್ಯಒತ್ತಡ ಎಚ್ಚಿ ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಇಂಧನ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುನಿಕೃಷ್ಣ, ವಿಶ್ವ, ಸಂತೋಷ್, ಲಕ್ಷ್ಮಣ್ ಶ್ರೀರಾಮರೆಡ್ಡಿ, ಯಲ್ಲೋಜಿರಾವ್, ಕೃಷ್ಣಪ್ಪ, ಬಾಬುರಾವ್, ಮುನಿರಾಜು ಮುಂತಾದವರು ಇದ್ದರು.