ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಟೋಲ್ ಬಳಿ ಆರ್ ಟಿ ಒ ಅಧಿಕಾರಿಗಳಿಂದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ದೇವನಹಳ್ಳಿ ಎಆರ್ ಟಿಒ ಶ್ರೀನಿವಾಸ್, ಸೀನಿಯರ್ ಬ್ರೇಕ್ ಇನ್ಸ್ ಪೆಕ್ಟರ್ ನರಸಿಂಹಮೂರ್ತಿ, ನಾಗರಾಜ್ ರಿಂದ ತಪಾಸಣೆ ನಡೆಸಲಾಯಿತು.
ದಸರಾ ಹಬ್ಬದ ಹಿನ್ನೆಲೆ ನಿಯಮ ಮೀರಿ ಪ್ರಯಾಣಿಕರ ಸಾಗಟದ ದೂರು ಹಿನ್ನೆಲೆ, ರಾಜ್ಯ ಹಾಗೂ ಅಂತಾರಾಜ್ಯ ಬಸ್ ಗಳ ದಾಖಲಾತಿಗಳ ಕುರಿತು ತಪಾಸಣೆ ನಡೆಸಲಾಯಿತು.
ಟ್ಯಾಕ್ಸ್ ಪಾವತಿಸದವರಿಗೆ, ಹೆಚ್ಚುವರಿ ಲಗೇಜ್ ಸಾಗಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಲಾಯಿತು. ಅದೇರೀತಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಯಿತು.