
ಬೆಳ್ಳಂಬೆಳಗ್ಗೆ ಭೀಕರ ಅಪಘಾತವಾಗಿದ್ದು, ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸುಮಾರು 6ಗಂಟೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದಲ್ಲಿ ನಡೆದಿದೆ.

ತೂಬಗೆರೆ ಮೂಲದ ನಂದನ್(22) ಮತ್ತು ರವಿಕುಮಾರ್(24) ಮೃತ ದುರ್ದೈವಿಗಳು. ಓರ್ವ ಯುವಕನಿಗೆ ಗಂಭೀರ ಗಾಯಗಳಾಗಿದೆ.

ಗಾಯಾಳನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ…. ಹಿಟ್ & ರನ್ ಶಂಕೆ ವ್ಯಕ್ತವಾಗಿದೆ…
ಕೆಲಸಕ್ಕೆಂದು ಬೈಕಿನಲ್ಲಿ ಇಬ್ಬರು ತೂಬಗೆರೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಬರುವಾಗ ರಾಮಯ್ಯನಪಾಳ್ಯದಲ್ಲಿ ವಾಕಿಂಗ್ ಮಾಡುವ ವ್ಯಕ್ತಿಯೊಬ್ಬರು ಬೈಕಿಗೆ ಅಡ್ಡಬಂದಿದ್ದು, ಆ ವ್ಯಕ್ತಿಯನ್ನು ಪಾರು ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ಕೂಡಲೇ ಅಪರಿಚಿತ ವಾಹನ ಬೈಕ್ ಸವಾರರ ತಲೆ ಮೇಲೆ ಹರಿದಿದೆ…. ತೀವ್ರ ರಕ್ತ ಸ್ರಾವದಿಂದ ಬೈಕ್ ಸವಾರರು ಅಸುನೀಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ….
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…