ಬೆಳೆ ಸಮೀಕ್ಷೆದಾರಿರಗೆ ಭದ್ರತೆ, ಜೀವ ವಿಮೆ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಕರ್ನಾಟಕದಲ್ಲಿ ನಾವುಗಳು ಸುಮಾರು 5-6 ವರ್ಷಗಳಿಂದ ಬೆಳೆ ಸಮಿಕ್ಷೇದಾರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಾವುಗಳು ಸೇವೆ ಸಲ್ಲಿಸುತ್ತಿರುವಾಗ ಹೊಲದಲ್ಲಿ ಹಾವು, ಚೇಳು ಕಚ್ಚಿರುತ್ತವೆ ಹಾಗೂ ಕಾಡು ಹಂದಿಗಳು, ತೋಳಗಳು, ಹೆಜ್ಜೇನುಗಳು ಸೇರಿದಂತೆ ಇತರೆ ಪ್ರಾಣಿಗಳ ದಾಳಿಯಿಂದ ಗಾಯಗೊಂಡಿರುತ್ತೇವೆ. ಹಿಂದೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ, ಹಾಗೂ ಕೋಡ್ಲಾ ಎಂಬ ಗ್ರಾಮದಲ್ಲಿ ನಮ್ಮ ಅಧಿಕಾರಿಗಳಿಗೆ (ಪಿ.ಆರ್) ಬೆಳೆ ಸಮಿಕ್ಷೇದಾರರಿಗೆ ಹಾವು ಕಚ್ಚಿದ್ದು, ಸಬಂಧಪಟ್ಟ ಅಧಿಕಾರಿಗಳಿಗೆ ಈ ಮಾಹಿತಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಇನ್ನೂ ಪರಿಹಾರ ನೀಡಿರುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

 ಕರ್ನಾಟಕ ಬೆಳೆ ಸಮಿಕ್ಷೇದಾರರ ಸಂಘದ ರಾಜ್ಯಾಧ್ಯಕ್ಷ ಮದುಚಂದ್ರ ಎಂ. ಮಹಾದೇವಯ್ಯ, ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜು ಡಿಪರೇಟ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ರಾಜ್ಯದ (ಪಿ.ಆ‌ರ್) ಸಮಿಕ್ಷೇದಾರರಿಗೆ ಸೇವಾ ಭದ್ರತೆ ಹಾಗೂ ಜೀವ ವಿಮೆ ಒದಗಿಸುವ ಮತ್ತುಖಾಯಂಗೊಳಿಸಲುವಂತೆ ಒತ್ತಾಯಿಸಿದ್ದಾರೆ.

ನಾವುಗಳು ಜೀವದ ಆಸೆ ಬಿಟ್ಟು ಶ್ರದ್ಧೆಯಿಂದ ಸೇವೆ ಮಾಡಿತ್ತಿದ್ದೇವೆ. ಸಮಿಕ್ಷೇ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ. ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಆದ ಕಾರಣ ನಮಗೆ ದಿನಗೂಲಿ ಆಧಾರದ ಮೇಲೆ ದಿನಪೂರ್ತಿ ಕೆಲಸ ನೀಡಬೇಕು ಹಾಗೂ ಜೀವ ವಿಮೆ ಒದಗಿಸಬೇಕು ಮತ್ತು ಎಲ್ಲಾ (ಪಿ.ಆರ್) ಬೆಳೆ ಸಮೀಕ್ಷದಾರಿಗೆ ರೇನ್ ಕೋಟ್ ನೀಡಬೇಕು ಹಾಗೂ ಗುರುತಿನ ಚೀಟಿ (ಬುಟ್) ಶೂ. ನೀಡಬೇಕು ಎಂದು ಪಿ.ರಾಜು ಡಿಪರೇಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಬೆಳೆ ಸಮಿಕ್ಷೇದಾರರ ಸಂಘ ಬೆಂಗಳೂರು ಒತ್ತಾಯಿಸಿದೆ.

Leave a Reply

Your email address will not be published. Required fields are marked *