ಬೆಲೆ ಕುಸಿತ: ಮಾರಾಟವಾಗದೇ ರಸ್ತೆಬದಿ ಪಾಲಾದ ಬೂದುಕುಂಬಳಕಾಯಿಗಳು

ದೊಡ್ಡಬಳ್ಳಾಪುರ: ಆಯುಧ ಪೂಜೆ ಪ್ರಾರಂಭಕ್ಕೂ ಒಂದು ವಾರಗಳ ಕಾಲ ಗಗನ ಮುಖಿಯಾಗಿದ್ದ ಬೂದುಕುಂಬಳ ಕಾಯಿ ಒಂದು ಕೆ.ಜಿ.₹18 ರಿಂದ ₹20ಗಳವರೆಗೂ ಮಾರಾಟವಾಯಿತು.

ಒಂದು ಬೂದುಕುಂಬಳ ಕಾಯಿ ಸುಮಾರು 4 ರಿಂದ 7 ಕೆ.ಜಿವರೆಗೂ ತೂಗುತ್ತಿದ್ದವು. ಆದರೆ, ಹಬ್ಬ ಮುಕ್ತಾಯವಾದ ನಂತರ ನಗರದ ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ರಾಶಿ ಗಟ್ಟಲೆ ಬೂದುಕುಂಬಳ ಕಾಯಿಗಳನ್ನು ರೈತರು ಸುರಿದು ಹೋಗಿರುವ ದೃಶ್ಯ ಸಾಮಾನ್ಯವಾಗಿದೆ.

ದೊಡ್ಡಬಳ್ಳಾಪುರ ಗೌರಿಬಿದಮನೂರು ರಸ್ತೆ, ಚಿಕ್ಕಬಳ್ಳಾಪುರ ರಸ್ತೆಗಳಲ್ಲಿಯೇ ಹೆಚ್ಚಿನ ಬೂದುಕುಂಬಳ ಕಾಯಿಗಳ ರಾಶಿ ಕಂಡುಬರುತ್ತಿವೆ.

ಬೆಲೆ ಇಲ್ಲದ ಸಮಯದಲ್ಲಿ ಟಾಮೊಟೋ ಹಣ್ಣು ಸುರಿಯುವಂತೆ ಈಗ ಬೂದುಕುಂಬಳ ಕಾಯಿಗಳನ್ನು ಸುರಿಯುವ ಸ್ಥಿತಿ ಬಂದಿದೆ.

‘ಆಯುಧ ಪೂಜೆ ಹೊರತು ಇತರೆ ಸಮಯದಲ್ಲಿ ಸಾಮಾನ್ಯವಾಗಿ ಬೂದುಕುಂಬಳ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ. ಹಬ್ಬದ ಸಮಯದ ಒಂದು ವಾರದ ವ್ಯಾಪಾರವನ್ನು ನಂಬಿ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಬೂದುಕುಂಬಳ ಕಾಯಿ ಬೆಳೆಯುವುದನ್ನು ನಿಲ್ಲಿಸಬೇಕು. ಕನಿಷ್ಟ ಪ್ರದೇಶದಲ್ಲಿ ಮಾತ್ರ ಹಬ್ಬದ ಸಮಯಕ್ಕಾಗಿ ಬೆಳೆಯಬೇಕು. ಕಾರ್ಮಿಕರ ಕೊರತೆ, ದುಬಾರಿ ರಸಗೊಬ್ಬರದ ಸಮಯದಲ್ಲಿ ರೈತರು ಬೆಳೆ ಬೆಳೆದೂ ಸಹ ಸಂಕಷ್ಟಕ್ಕೆ ಸಿಲುಕುಂತಾಗಬಾರದು’ ಎಂದು ಅಲಪನಹಳ್ಳಿ ಗ್ರಾಮದ ರೈತ ಹನುಮೇಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!