ಬೆಂ.ಗ್ರಾ. ಜಿಲ್ಲೆ: ಶೇ. 83.04 ರಷ್ಟು ದ್ವಿತೀಯ ಪಿಯುಸಿ ಫಲಿತಾಂಶ

2022-23ನೇ ಶೈಕ್ಷಣಿಕ ಸಾಲಿನ‌ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಇಂದು(2023ರ ಏಪ್ರಿಲ್ 21 ರಂದು) ಪ್ರಕಟಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 83.04 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 09ನೇ‌ ಸ್ಥಾನವನ್ನು ಪಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆಗೆ ಹಾಜರಾದ 9988 ವಿದ್ಯಾರ್ಥಿಗಳ ಪೈಕಿ 7858 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಯು ಶೇ. 78.67 ರಷ್ಟು ಫಲಿತಾಂಶ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ 2022-23ನೇ ಸಾಲಿನ(ಪ್ರೆಶ್) 8701 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 7225 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 83.04 ರಷ್ಟು ಫಲಿತಾಂಶ ದೊರಕಿದೆ.

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 4641 ಬಾಲಕರು ಹಾಜರಾಗಿದ್ದು, 3490 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 75.2 ರಷ್ಟು ಫಲಿತಾಂಶ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಒಟ್ಟು 5347 ಬಾಲಕಿಯರು ಪೈಕಿ 4368 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ. 81.69 ರಷ್ಟು ಫಲಿತಾಂಶ ದೊರಕಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಕಲಾ ವಿಭಾಗದಿಂದ ಹಾಜರಾದ ಒಟ್ಟು 1487 ವಿದ್ಯಾರ್ಥಿಗಳ ಪೈಕಿ 884 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 59.45 ರಷ್ಟು ಫಲಿತಾಂಶ ಪಡೆದಿದೆ.

ವಾಣಿಜ್ಯ ವಿಭಾಗದಿಂದ ಹಾಜರಾದ ಒಟ್ಟು 5369 ವಿದ್ಯಾರ್ಥಿಗಳ ಪೈಕಿ 4211 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 78.43 ರಷ್ಟು ಫಲಿತಾಂಶ ದೊರೆತಿದೆ.

ವಿಜ್ಞಾನ ವಿಭಾಗದಿಂದ ಹಾಜರಾದ ಒಟ್ಟು 3132 ವಿದ್ಯಾರ್ಥಿಗಳ ಪೈಕಿ 2763 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 88.22 ರಷ್ಟು ಫಲಿತಾಂಶ ಪಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *