ಬೆಂ.ಗ್ರಾ.ಜಿಲ್ಲೆ ವ್ಯಾಪ್ತಿಯಲ್ಲಿ 36 ವಿಶೇಷ ಮತಗಟ್ಟೆಗಳ ಸ್ಥಾಪನೆ

ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ಹೆಚ್ಚಿಸುವ ಸಲುವಾಗಿ ಹಾಗೂ ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಸಲುವಾಗಿ ಮತದಾರರನ್ನು ಆಕರ್ಷಿಸಲು ವಿಶೇಷ ಮತಗಟ್ಟೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲಾಗಿದೆ.

*36 ವಿಶೇಷ ಮತಗಟ್ಟೆಗಳು*

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 04 ಯುವ ಮತಗಟ್ಟೆಗಳು, 20 ಮಹಿಳಾ ಮತಗಟ್ಟೆಗಳು(ಸಖಿ), ೦4 ವಿಶೇಷ ಚೇತನ ಮತಗಟ್ಟೆಗಳು, 04 ವಿಷಯಾಧಾರಿತ ಮತಗಟ್ಟೆಗಳು , 04 ಮಾದರಿ ಮತಗಟ್ಟೆಗಳು ಸೇರಿ ಒಟ್ಟು 36 ವಿಶೇಷ ಮತಗಟ್ಟೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.

*ವಿಶೇಷ ಮತಗಟ್ಟೆಗಳ ವಿವರ ಕೆಳಕಂಡಂತಿದೆ*

*179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ*

ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಯುವ ಮತಗಟ್ಟೆಗಳು -1:- ಮತಗಟ್ಟೆ ಸಂಖ್ಯೆ -232 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಮಂಗಲ.

ಮಹಿಳಾ ಸಿಬ್ಬಂದಿ ನಿರ್ವಹಿಸುವ (ಸಖಿ) ಮತಗಟ್ಟೆಗಳು05:- ಮತಗಟ್ಟೆ ಸಂಖ್ಯೆ-103, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ರೂಂ ನಂ-1 ದೇವನಹಳ್ಳಿ ರಸ್ತೆ , ವಿಜಯಪುರ ಟೌನ್, ಮತಗಟ್ಟೆ ಸಂಖ್ಯೆ -85 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ- 2 ಕಾರಹಳ್ಳಿ, ಮತಗಟ್ಟೆ ಸಂಖ್ಯೆ 200 ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ-2 ಬೆಂಗಳೂರು -ಬಳ್ಳಾರಿ ರೋಡ್ ದೇವನಹಳ್ಳಿ ಟೌನ್, ಮತಗಟ್ಟೆ ಸಂಖ್ಯೆ 29 ಉಪ ತಹಶೀಲ್ದಾರ್ ಕಚೇರಿ ತೂಬಗೆರೆ ಕೊಠಡಿ ಸಂಖ್ಯೆ -1, ಮತಗಟ್ಟೆ ಸಂಖ್ಯೆ 290 ಶ್ರೀ ಸಿದ್ದಗಂಗಾ ಸಯುಕ್ತ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಬೂದಿಗೆರೆ ಕೊಠಡಿ ಸಂಖ್ಯೆ 2.

ವಿಶೇಷ ಚೇತನ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆ 01:-ಮತಗಟ್ಟೆ ಸಂಖ್ಯೆ 199-ಸರ್ಕಾರಿ ಪದವಿಪೂರ್ವ ಕಾಲೇಜು ಕೊಠಡಿ ಸಂಖ್ಯೆ-1 ಬೆಂಗಳೂರು ಬಳ್ಳಾರಿ ರಸ್ತೆ ದೇವನಹಳ್ಳಿ.

ಮಾದರಿ ಮತಗಟ್ಟೆ-01:- ಮತಗಟ್ಟೆ ಸಂಖ್ಯೆ-80 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ವೆಂಕಟಗಿರಿ ಕೋಟೆ.

ವಿಶೇಷ/ವಿಷಯಾಧಾರಿತ ಮತಗಟ್ಟೆ-01:- ಮತಗಟ್ಟೆ ಸಂಖ್ಯೆ-238 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಅಣ್ಣೇಶ್ವರ.

*180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ*

ದೊಡ್ಡಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಸಲುವಾಗಿ ಒಂದು ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ -238 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಾಪುರ.

ಮಹಿಳಾ ಸಿಬ್ಬಂದಿ ನಿರ್ವಹಿಸುವ ಸಲುವಾಗಿ 5 ಮತಗಟ್ಟೆಗಳು ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-104 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-2,ಕೋನಘಟ್ಟ., ಮತಗಟ್ಟೆ ಸಂಖ್ಯೆ -241 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ -2, ಬಾಶೆಟ್ಟಹಳ್ಳಿ , ಮತಗಟ್ಟೆ ಸಂಖ್ಯೆ-122 ‌ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-4,ಖಾಸಬಾಗ್ ದೊಡ್ಡಬಳ್ಳಾಪುರ, ಮತಗಟ್ಟೆ ಸಂಖ್ಯೆ-138 ಸರ್ಕಾರಿ ಪ್ರೌಢಶಾಲೆ ಹೊಸ ಕಟ್ಟಡ ಕೊಠಡಿ ಸಂಖ್ಯೆ-1 ಅರಳುಮಲ್ಲಿಗೆ ಬಾಗಿಲು ದೊಡ್ಡಬಳ್ಳಾಪುರ, ಮತಗಟ್ಟೆ ಸಂಖ್ಯೆ-209 ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ-1, ದೊಡ್ಡ ಬೆಳವಂಗಳ.

ವಿಶೇಷ ಚೇತನರು ನಿರ್ವಹಿಸುವ ಸಲುವಾಗಿ ಒಂದು ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ 192 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1, ದರ್ಗಾ ಜೋಗಿಹಳ್ಳಿ.

ಮಾದರಿ ಮತಗಟ್ಟೆ ಒಂದು ತೆರೆಯಲಾಗಿದ್ದು ಮತಗಟ್ಟೆ ಸಂಖ್ಯೆ-200 ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1, ಅರಳುಮಲ್ಲಿಗೆ.

ವಿಶೇಷ/ವಿಷಯಾಧಾರಿತ ಮತಗಟ್ಟೆ ಒಂದು ತೆರೆಯಲಾಗಿದ್ದು, ಮತಗಟ್ಟೆ ಸಂಖ್ಯೆ-271 ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಣಸವಾಡಿ.

*178- ಹೊಸಕೋಟೆ ವಿಧಾನಸಭಾ ಕ್ಷೇತ್ರ*

ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 05:- ಮತಗಟ್ಟೆ ಸಂಖ್ಯೆ. 251 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂ.1 ಸಮೇತನಹಳ್ಳಿ, ಮತಗಟ್ಟೆ ಸಂಖ್ಯೆ. 162 ಸ್ವತಂತ್ರ ಪದವಿ ಪೂರ್ವ ಕಾಲೇಜು ದಕ್ಷಿಣ ಭಾಗ-1 ಕೊಠಡಿ ಸಂ. 4 ಹೊಸಕೋಟೆ ಟೌನ್, ಮತಗಟ್ಟೆ ಸಂಖ್ಯೆ. 14 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 2 ನೆಲವಾಗಿಲು, ಮತಗಟ್ಟೆ ಸಂಖ್ಯೆ. 30 ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ. 1 ನಂದಗುಡಿ, ಮತಗಟ್ಟೆ ಸಂಖ್ಯೆ. 175 ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಖಾಜಿಮೊಹಲ್ಲ, ಪೂರ್ವ ಭಾಗ- ಕೊಠಡಿ ಸಂಖ್ಯೆ. 1 ಹೊಸಕೋಟೆ ಟೌನ್,

ವಿಶೇಷ ಚೇತನರ ಮತಗಟ್ಟೆಗಳು:- ಮತಗಟ್ಟೆ ಸಂಖ್ಯೆ. 154 ಸ್ವತಂತ್ರ ಪದವಿ ಪೂರ್ವ ಕಾಲೇಜು (ಪೂರ್ವ ಭಾಗ-1 ಕೊಠಡಿ ಸಂಖ್ಯೆ. 1) ಎಮ್.ವ್ಹಿ ಎಕ್ಸ್ಟೆನ್ಷನ್ ಹೊಸಕೋಟೆ ಟೌನ್.

ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 145 ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಎಮ್.ವ್ಹಿ ಎಕ್ಸ್ಟೇನ್ಷನ್ ಕೊಠಡಿ ಸಂ. 1 ಪೂರ್ವ ಭಾಗ) ಹೊಸಕೋಟೆ.

ಮಾದರಿ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 165 ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ಕೊಠಡಿ ಸಂಖ್ಯೆ. 1 ಹೊಸಕೋಟೆ ಟೌನ್.

ವಿಶೇಷ/ವಿಷಯಾಧಾರಿತ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 245 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೊಠಡಿ ಸಂಖ್ಯೆ. 1 ಮಲ್ಲಸಂದ್ರ) ಸಮೇತನಹಳ್ಳಿ.

*181-ನೆಲಮಂಗಲ ವಿಧಾನಸಭಾ ಕ್ಷೇತ್ರ*

ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 183 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ ಭಾಗ, ಕೊಠಡಿ ಸಂಖ್ಯೆ. 2 ಅಡೆಪೇಟೆ) ನೆಲಮಂಗಲ.

ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 5:- ಮತಗಟ್ಟೆ ಸಂಖ್ಯೆ. 233 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಚಿಪುರ, ಮತಗಟ್ಟೆ ಸಂಖ್ಯೆ. 46 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 3 (ಉತ್ತರ ಭಾಗ) ಸೊಂಪುರ-3, ಮತಗಟ್ಟೆ ಸಂಖ್ಯೆ. 148 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 1 ಬಸನಹಳ್ಳಿ-1, ಮತಗಟ್ಟೆ ಸಂಖ್ಯೆ. 250 ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಸೋಲೂರು-4, ಮತಗಟ್ಟೆ ಸಂಖ್ಯೆ. 52 ಸರ್ಕಾರಿ ಹಿರಿಯ ಹೊಸ ಪ್ರಾಥಮಿಕ ಶಾಲೆ ಹೊನ್ನೇನಹಳ್ಳಿ.

ವಿಶೇಷ ಚೇತನರ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 176 ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ. 2 ನೆಲಮಂಗಲ ಟೌನ್-5.

ಮಾದರಿ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 47 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 4 (ಉತ್ತರ ಭಾಗ) ಸೋಂಪುರ-4.

ವಿಶೇಷ/ವಿಷಯಾಧಾರಿತ ಮತಗಟ್ಟೆಗಳು 1:- ಮತಗಟ್ಟೆ ಸಂಖ್ಯೆ. 88 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿವಗಂಗೆ.

*ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಿಶೇಷ ವಿಷಯಾಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ*

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ತೋಟಗಾರಿಕೆ, ಪುಷ್ಪ ಕೃಷಿ ವಿಶೇಷ ವಿಷಯಾಧಾರಿತವಾಗಿ ಚಕ್ಕೊತ,ನೀಲಿ ದ್ರಾಕ್ಷಿ ಮತ್ತು ಗುಲಾಬಿ ಹೂವಿನ ಆಕರ್ಷಕ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-238 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಅಣ್ಣೇಶ್ವರ.

ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಸಾಂಸ್ಕೃತಿಕ ವಿಷಯಾಧಾರಿತವಾದ ಸುಗ್ಗಿ ಹಬ್ಬ,ಎತ್ತಿನ ಬಂಡಿಯ ಆಕರ್ಷಕ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-88 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಿವಗಂಗೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ರೇಷ್ಮೆ ಸೀರೆ ತಯಾರಿಕೆ ವಿಶೇಷ ವಿಷಯಾಧಾರಿತ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-271 ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಣಸವಾಡಿ.

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಸಾಂಸ್ಕೃತಿಕ ವಿಷಯಾಧಾರಿತವಾದ ಕರಗ,ಡೈರಿ ಉತ್ಪನ್ನಗಳು ಮತ್ತು ಫಲಪುಷ್ಪ ಅಲಂಕಾರಿಕ ಆಕರ್ಷಕ ಮತಗಟ್ಟೆಯನ್ನು ತೆರೆಯಲಾಗಿದೆ. ಮತಗಟ್ಟೆ ಸಂಖ್ಯೆ-245 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1, ಮಲ್ಲಸಂದ್ರ ಸಮೇತನಹಳ್ಳಿ.

Leave a Reply

Your email address will not be published. Required fields are marked *