
ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್‌ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ (DIG) ಯಾಗಿ ನೇಮಕ ಮಾಡಲಾಗಿದೆ.
ಸಿ ಕೆ ಬಾಬಾ ವರ್ಗಾವಣೆಗೊಂಡ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ (SP) ಆಗಿ ಚಂದ್ರಕಾಂತ್ ಎಂ.ವಿ ಅವರು ನೇಮಕಗೊಂಡಿದ್ದಾರೆ.

23 IPS ಅಧಿಕಾರಿಗಳಿಗೆ ಬಡ್ತಿ, 20 IPS ಅಧಿಕಾರಿಗಳ ವರ್ಗಾವಣೆ
ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..
( ಮುಂಬಡ್ತಿ)
ಬೋರಲಿಂಗಯ್ಯ, ಐಜಿಪಿ ಮೈಸೂರು ವಲಯ..
ರಾಮ್ ನಿವಾಸ್ ಸಫೇಟ್ ಐಜಿಪಿ ಎಸ್ ವಿಪಿ..ಎನ್ ಪಿಎ..
ಅನುಪಮ್ ಅಗರ್ ವಾಲ್( ಐಜಿಪಿ ಸಿಆರ್ ಪಿಎಫ್)
ಭೀಮಾಶಂಕರ್ ಗುಳೇದ್, DIGP, CID..
ಡಿ ದೇವರಾಜ್, DIGP, ಟ್ರೈನಿಂಗ್..
ಸಿ. ಕೆ ಬಾಬಾ. DIGP ಕೆ.ಎಸ್.ಆರ್.ಪಿ..
ಗಿರೀಶ್. ಎಸ್ DIGP,ANTF..
ಸಂಜೀವ್ ಪಾಟೀಲ್,DIGP, DG ಕಚೇರಿ..
ಕಲಾಕೃಷ್ಣಸ್ವಾಮಿ DIGP, ಕ್ರೈಂ..
ವಿಷ್ಣುವರ್ಧನ, ಡೈರೆಕ್ಟರ್ ಕರ್ನಾಟಕ ಪೊಲೀಸ್ ಅಕಾಡೆಮಿ..
ಪರಶುರಾಮ್, DIGP, CTRS..
ರಾಹುಲ್ ಕುಮಾರ್, ಡಿಐಜಿಪಿ ಎನ್ ಐಎ
ಧರ್ಮೇಂದ್ರ ಕುಮಾರ್ ಮೀನ( ಡಿ ಐಜಿಪಿ ಎನ್ ಟಿಆರ್ ಒ)
ಶಾಂತರಾಜು, ಡಿಐಜಿಪಿ ಐಎಸ್ ಡಿ..
ಸಿರಿಗೌರಿ ಡಿ ಐಜಿಪಿ ( ಎಸ್ ಸಿ ಆರ್ ಬಿ)
ಎಸ್ ಸವಿತಾ ಡಿಐಜಿಪಿ ( ಅಡಿಷನಲ್ ಕಮಾಂಡೆಂಟ್ ಜನರಲ್..ಹೋಮ್ ಗಾರ್ಡ್..
20 IPS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ..
ಅರುಣಾಂಶು ಗಿರಿ( ಎಸ್ ಪಿ ರಾಯಚೂರು)
ಸಿಕೆ ಮಿಥುನ್ ಕುಮಾರ್ ( ಈಶಾನ್ಯ ವಿಭಾಗ) ಡಿಸಿಪಿ..
ಯತೀಶ್ ಎನ್ ( ಪಶ್ಚಿಮ ವಿಭಾಗ) ಡಿಸಿಪಿ
ಸೈದುಲಾ ಅದಾವತ್ ( ವೈಟ್ ಫೀಲ್ಡ್ ಡಿಸಿಪಿ)
ಮಲ್ಲಿಕಾರ್ಜುನ್ ಬಾಲದಂಡಿ( ಎಸ್ ಪಿ ಮೈಸೂರು..)
ಶೋಭಾರಾಣಿ, SP ಮಂಡ್ಯ ..
ಕವಿತಾ ( ಎಸ್ ಪಿ ಸಿಐಡಿ)
ನಿಖಿಲ್ ( ಎಸ್ ಪಿ ಶಿವಮೊಗ್ಗ)
ಕೆ ರಾಮರಾಜನ್ ( ಬೆಳಗಾವಿ ಎಸ್ ಪಿ)
ಬಿಂದುಮಣಿ ( ಕೊಡಗು ಎಸ್ ಪಿ)
ಮಹಮದ್ ಸುಜೇತಾ, DCP
ಆಗ್ನೇಯ ವಿಭಾಗ ಬೆಂಗಳೂರು..
ಚಂದ್ರಕಾಂತ್, SP, ಬೆಂಗಳೂರು ಗ್ರಾಮಾಂತರ..