ಬೆಂಗಳೂರು-ನೆಲಮಂಗಲ ಹೆದ್ದಾರಿ ರಸ್ತೆಯಲ್ಲಿ ಮೊಳೆಗಳ ಅವಾಂತರ: ವಾಹನ ಸವಾರರ ಜೇಬಿಗೆ ಕತ್ತರಿ:  ಹೆದ್ದಾರಿಯ ಪಕ್ಕದ ಪಂಚರ್ ಶಾಪ್ ಮೇಲೆ ನಿಗಾ ವಹಿಸಿದ ಪೊಲೀಸ್ ಇಲಖೆ

ಬೆಂಗಳೂರು-ನೆಲಮಂಗಲ ಹೆದ್ದಾರಿ ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲಿ ಸಂಚಾರಕ್ಕೆ ಅಡಚಣೆ ಉಂಟುಮಾಡುತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದ ಹಿನ್ನೆಲೆ ನೆಲಮಂಗಲ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಪಂಚರ್ ಶಾಪ್ ಗಳನ್ನು ಪರಿಶೀಲನೆ ಮಾಡಿ ಮಾಲೀಕರಿಗೆ ಮೊಳೆಗಳನ್ನು ರಸ್ತೆಯಲ್ಲಿ ಚೆಲ್ಲದಂತೆ ಎಚ್ಚರಿಕೆ ಮತ್ತು ತಿಳುವಳಿಕೆ ನೀಡಲಾಯಿತು.

ಇತ್ತೀಚಿನ ದಿನಗಳಲ್ಲಿ ಹಲವು ವಾಹನಗಳ ಚಕ್ರಗಳು ಮೊಳೆಗಳಿಂದಾಗಿ ಪಂಕ್ಚರ್ ಆಗುತ್ತಿರುವುದರಿಂದ ಮಾಲೀಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆಗಳು ಕಂಡುಬರುತ್ತಿದ್ದು, ಇದರ ಹಿಂದೆ ಪಂಕ್ಚರ್ ಮಾಫಿಯಾದ ಕೈವಾಡವಿದೆ ಎನ್ನಲಾಗುತ್ತಿದೆ. ರಸ್ತೆಗಳಲ್ಲಿ ಓಡಾಡುವ ವಾಹನಗಳ ಚಕ್ರಗಳು, ಮೊಳೆ ಸಿಲುಕಿ ಪಂಕ್ಚರ್ ಆಗುತ್ತಿವೆ. ಮೊಳೆಗಳು ರಸ್ತೆ ಮೇಲೆ ಬಿದ್ದಿರುವುದರ ಹಿಂದೆ ಸುತ್ತಮುತ್ತಲಿನ ಪಂಕ್ಚರ್‌​ ಅಂಗಡಿಗಳ ಕೈವಾಡವಿರುವ ಅನುಮಾನ ವ್ಯಕ್ತವಾಗುತ್ತು. ಈ ಹಿನ್ನೆಲೆ ಪೊಲೀಸ್ ಇಲಾಖೆ ವತಿಯಿಂದ ಪಂಕ್ಚರ್ ಶಾಪ್ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!