ಬೆಂಗಳೂರು ನಗರದ ಟ್ರಾಫಿಕ್ ತಡೆಯಲು ರಾ.ಹೆ207 ಅತಿಮುಖ್ಯ- ಸತೀಶ್ ಜಾರಕಿಹೊಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 207 ಕಾಮಾಗಾರಿ ನಡೆಯುತ್ತಿದ್ದು, ಕಾಮಗಾರಿ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿಯ ಪರಿಶೀಲನೆಯನ್ನ ಸಚಿವ ಸತೀಶ್ ಜಾರಕಿಹೊಳಿ ನಡೆಸಿದರು, ಇದೇ ವೇಳೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರು ಮತ್ತು ಅಧಿಕಾರಿಗಳು ಹಾಜರಿದ್ದರು.

ನಂತನ ಮಾಧ್ಯಮದೊಂದಿಗೆ ಮತನಾಡಿದ ಅವರು, ಬೆಂಗಳೂರು ಸಿಟಿಗೆ ಹೋಗದೆ ಚೆನೈ ಮತ್ತು ಹೈದರಬಾದ್ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ನಿರ್ಮಿಸುವುದು ಬಹಳ ಹಿಂದಿನ ಕನಸು, ಅಂತಹದೊಂದು ರಸ್ತೆ ರಾಷ್ಟ್ರೀಯ ಹೆದ್ದಾರಿ 207, ಇಡೀ ದಿನ ಹೆದ್ದಾರಿಯ ವೀಕ್ಷಣೆ ಮಾಡಲಾಗುವುದು, ಹೆದ್ದಾರಿಯ ಪ್ರಗತಿಯ ಬಗ್ಗೆ ತಿಳಿಯಲಿದ್ದು ಕಾಮಾಗಾರಿಯ ವೇಗ ಹೆಚ್ಚಿಸುವ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದರು.

ಬೆಂಗಳೂರು ಟ್ರಾಫಿಕ್ ತಡೆಯಲು ಈ ಹೆದ್ದಾರಿ ಬಹಳ ಮುಖ್ಯವಾಗಿದ್ದು ಮೊದಲ ಆದ್ಯತೆಯನ್ನ ಹೊಸೂರು-ದಾಬಸ್ ಪೇಟೆ ಹೆದ್ದಾರಿಗೆ ನೀಡಲಾಗುವುದು, ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣದ ಬಗ್ಗೆಯೂ ಬೇಡಿಕೆ ಇದ್ದು ಅವುಗಳ ಬಗ್ಗೆಯೂ ಅಧಿಕಾರಿಗ ಜೊತೆ ಚರ್ಚೆ ಮಾಡಲಾಗುವುದು ಎಂದರು.

ನಂತರ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಈ‌ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ‌.ಹೆಚ್‌.ಮುನಿಯಪ್ಪ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಜಿಲ್ಲಾಧಿಕಾರಿ ಡಾ.ಎನ್.ಶಿವಂಶಕರ್, ಅಪರ ಜಿಲ್ಲಾಧಿಕಾರಿ, ತಾ.ಪಂ ಇಒ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *