ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ವರ್ಗಾವಣೆ: ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆ

ಫೆ.26ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರನ್ನು ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ್‌ ಆದೇಶಿಸಿದ್ದರು.

ಎ.ಬಿ. ಬಸವರಾಜು ಅವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಡಾ. ಅನುರಾಧಾ ಕೆ.ಎನ್. ಅವರನ್ನು ನೇಮಕ ಮಾಡಲಾಗಿದ್ದು, ಜಿಪಂ ಪ್ರಭಾರ ಸಿಇಒ ಆಗಿ ಮುಂದುವರಿಸಲಾಗಿದೆ.

ಚರ್ಚೆಗೆ ಗ್ರಾಸವಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ವರ್ಗಾವಣೆ

ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರನ್ನು ವರ್ಗಾವಣೆ ಮಾಡಿರುವುದು ಹಾಗೂ ತೆರವಾದ ಜಾಗಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ಡಾ. ಅನುರಾಧಾ ಕೆ.ಎನ್. ಅವರನ್ನು ನೇಮಕ ಮಾಡಿರುವುದಕ್ಕೆ ಕೆಲವೊಂದು ಆಕ್ಷೇಪಗಳು ಹಾಗೂ ಸಮರ್ಥನೆಗಳು ಸಾರ್ವಜನಿಕ‌ ವಲಯದಲ್ಲಿ ಕೇಳಿಬರುತ್ತಿವೆ…

ವಿರೋಧ

* ನಿಷ್ಠಾವಂತರಿಗೆ ಈ ಸರ್ಕಾರದಲ್ಲಿ ಕಾಲ ಬರುವುದು ಕಷ್ಟ. ಈ ಸರ್ಕಾರಕ್ಕೆ ತಕ್ಕಂತೆ, ಅವರು ಹೇಳಿದ ಹಾಗೆ ಕೇಳಿಕೊಂಡು, ಇವರಿಗೆ ಮಾಡುವ ಭ್ರಷ್ಟಾಚಾರಗಳಿಗೆ ಬೆಂಬಲಕ್ಕೆ ನಿಂತುಕೊಂಡರೆ ಆಗ ಇಂತಹ ಇಂದು ಅಧಿಕಾರಿಗಳಿಗೆ ಬೆಂಬಲ ಕೊಡುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಲಾಗಿದೆ…

* ಉಸ್ತುವಾರಿ ಮಂತ್ರಿಗಳ ಪಿಎ ಅವರ ಅನುಕೂಲಕ್ಕಾಗಿ ಅವರ ಸಂಬಂಧಿಕರನ್ನೇ ಜಿಲ್ಲಾಧಿಕಾರಿಗಳಾಗಿ ಮಾಡಿಸಿಕೊಂಡಿದ್ದಾರೆ, ಇದು ರಾಜಕೀಯ ಪ್ರೇರಿತ ವರ್ಗಾವಣೆ ಮಾನ್ಯ ಬಸವರಾಜ್ ರವರು ಬಡವರ ಪರ ನ್ಯಾಯ ನೀತಿ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕೈಗೊಂಡ ನಿಷ್ಠಾವಂತ ಅಧಿಕಾರಿ, ಅಕ್ರಮ ಗಣಿಗಾರಿಕೆಗೆ ಸಪೋರ್ಟ್ ಮಾಡಲಿಲ್ಲವೆಂದು ಮಾನ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಯಲ್ಲಿ ಇದು ಒಂದು ಎಂದು ಕಿಡಿಕಾರಿದ್ದಾರೆ..

* ಬಸವರಾಜ್ ಸಾರ್. ಮೊನ್ನೇ ಮೋನ್ನೇ ಬಂದಿದ್ದು. ಈಸ್ಟ್ ಬೇಗ ವರ್ಗಾ ವಾಗಿದೆ. ಕಾರಣ ಕೋಡಿ… ಎಂದು ಪ್ರಶ್ನೆ ಮಾಡಲಾಗಿದೆ..

* ತನ್ನ ಅಧೀನದಲ್ಲಿ ಇರುವ ಅಧಿಕಾರಿಗಳನ್ನು ತನ್ನ ಆತೋಟಿಯಲ್ಲಿ ಇಟ್ಟು ಭ್ರಷ್ಟಾಚಾರ ಕಡಿವಾಣ ಹಾಕದೆ ಕಂಡು ಕಾಣದ ಹಾಗೆ ಇರುವ ಅಧಿಕಾರಿ ನಿಷ್ಠಾವಂತರ  ಯಾಕೆ ಬೇರೆ ಯಾರೂ ಅದರಲ್ಲೂ ಒಬ್ಬ ಹೆಣ್ಣು ಮಗಳು ಜಿಲ್ಲಾಧಿಕಾರಿ ಆಗಿದ್ದು ಸರಿ ಅನಿಸುತ್ತಿಲ್ಲವಾ ಎಂದು ಪ್ರಶ್ನಿಸಲಾಗಿದೆ…

* ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಶ್ರೀ ಎ.ಬಿ. ಬಸವರಾಜು ಅವರ ವರ್ಗಾವಣೆ ಜಿಲ್ಲೆಯ ಜನತೆಗೆ ನಿಜಕ್ಕೂ ಬೇಸರದ ಸಂಗತಿ.

ಅವರು ಕೇವಲ ಅಧಿಕಾರಿಯಾಗಿ ಮಾತ್ರವಲ್ಲ, ಜನರ ನಡುವೆ ಬೆರೆತು ಕೆಲಸ ಮಾಡಿದ ಒಬ್ಬ ಜನಪರ ಆಡಳಿತಗಾರರಾಗಿದ್ದರು. ಸಾಮಾನ್ಯ ಜನರ ಅಹವಾಲುಗಳನ್ನು ಶ್ರದ್ಧೆಯಿಂದ ಆಲಿಸಿ, ಸರಳತೆ ಮತ್ತು ದೃಢತೆಯೊಂದಿಗೆ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದವರು.

ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಜಾನುವಾರು ಜಾತ್ರೆಗೆ ವಿಶೇಷ ಕಾಳಜಿ ವಹಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ನೀಲನಕ್ಷೆ ರೂಪಿಸಿದರು. ಸುಂಕ ರಹಿತ ಜಾತ್ರೆಯನ್ನು ಜಾರಿಗೊಳಿಸಿ, ರೈತರಿಗೆ ನೇರವಾಗಿ ಅನುಕೂಲವಾಗುವಂತೆ ಕ್ರಮ ಕೈಗೊಂಡದ್ದು ಅವರ ಜನಪರ ಮನೋಭಾವದ ಪ್ರತಿಬಿಂಬವಾಗಿದೆ.

ಸರ್ಕಾರಿ ಭೂಮಿಯನ್ನು ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಭೂಗಳ್ಳರಿಗೆ ಸಿಂಹಸ್ವಪ್ನರಾಗಿದ್ದರು. “ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ” ಎಂಬ ಧ್ಯೇಯದೊಂದಿಗೆ ಶಿಕ್ಷಣ ಕ್ಷೇತ್ರಕ್ಕೂ ಹೊಸ ಚೈತನ್ಯ ತುಂಬಿದರು. ತೂಬಗೆರೆ ಹಲಸಿಗೆ ಬ್ರಾಂಡ್ ಪೇಟೆಂಟ್ ಪಡೆಯುವ ಪ್ರಯತ್ನಗಳ ಮೂಲಕ ಸ್ಥಳೀಯ ಉತ್ಪನ್ನಕ್ಕೆ ಗುರುತಿನ ಮುದ್ರೆ ಒದಗಿಸಲು ಮುಂದಾದರು.

ಯುವಕರೊಂದಿಗೆ ಚಾರಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಆಡಳಿತ ಮತ್ತು ಯುವಶಕ್ತಿಯ ನಡುವೆ ಸೇತುವೆ ನಿರ್ಮಿಸಿದ ಅಧಿಕಾರಿಯಾಗಿದ್ದರು.

ಇಂತಹ ಪ್ರಾಮಾಣಿಕ, ದಕ್ಷ ಮತ್ತು ಹೃದಯವಂತ ಅಧಿಕಾರಿಯನ್ನು ಪಡೆದ ನಾವು ಭಾಗ್ಯವಂತರು. ಅವರು ಇನ್ನೂ ಹೆಚ್ಚಿನ ಕಾಲ ನಮ್ಮ ಜಿಲ್ಲೆಯಲ್ಲೇ ಸೇವೆ ಸಲ್ಲಿಸಬೇಕೆಂಬುದು ಜನಮನದ ಆಶೆಯಾಗಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ…

Ramesh Babu

Journalist

Recent Posts

ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…

10 hours ago

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

14 hours ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

17 hours ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

1 day ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

1 day ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

2 days ago