ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25 ಪ್ರವಾಸಿ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ನೀತಿ 2024-25 ರಡಿ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ನೋಡುವುದಾದರೆ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ದೇವನಹಳ್ಳಿ ಕೋಟೆ, ಕುಂದಾಣ ಬೆಟ್ಟ, ಶ್ರೀ ಕೋಟೆ ವೇಣುಗೋಪಾಲಸ್ವಾಮಿ ದೇವಸ್ಥಾನ, ಆವತಿ ಬೆಟ್ಟ, ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ, ಆವತಿ ಕೆರೆ, ಶಿರಡಿ ಸಾಯಿ ಬಾಬಾ ದೇವಾಲಯ, ವೃಕ್ಷೋದ್ಯಾನ ಟ್ರೀ ಪಾರ್ಕ್, ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣ.

ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಚಿಕ್ಕ ಮಧುರೆ, ಮಾಕಳಿ ದುರ್ಗ ಬೆಟ್ಟ, ಹುಲ್ಲುಕುಡಿ ಬೆಟ್ಟ.

ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಶಿವಗಂಗೆ ಬೆಟ್ಟ, ನಿಜಗಲ್ ಸಿದ್ದರಬೆಟ್ಟ, ಉದ್ದಾನ ವೀರಭದ್ರ ಸ್ವಾಮಿ ದೇವಸ್ಥಾನ, ಮಹಿಮಾ ರಂಗನಾಥ ಸ್ವಾಮಿ ದೇವಸ್ಥಾನ, ವೀರಭದ್ರ ಸ್ವಾಮಿ ದೇವಸ್ಥಾನ-ದೇವರ ಹೊಸಹಳ್ಳಿ, ಮಣ್ಣೇ(ಮಾನ್ಯಪುರ), ಶ್ರೀ ರಾಮಲಿಂಗೇಶ್ವರ ದೇವಸ್ಥಾನ-ಬರದಿ ಬೆಟ್ಟ.

ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಹೊಸಕೋಟೆ ಕೆರೆ(ದೊಡ್ಡ ಅಮಾನಿಕೆರೆ), ಧರ್ಮೇಶ್ವರ್ ದೇವಸ್ಥಾನ-ಕೊಂಡ್ರಹಳ್ಳಿ, ಕಾಲಭೈರವೇಶ್ವರ ದೇವಸ್ಥಾನ ಜಡಿಗೇನಹಳ್ಳಿ. ಕಾಲಕುಂಟೆ ರಂಗನಾಥ ಸ್ವಾಮಿ ದೇವಸ್ಥಾನ. ಸಪ್ತಮಾತೆಯ ದೇವಸ್ಥಾನ-ಜಡಿಗೆನಹಳ್ಳಿ ಈ ಸ್ಥಳಗಳನ್ನು ಜಿಲ್ಲೆಯ ಪ್ರಮುಖ 25 ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!