ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನ ಸಾಗಾಟ ಮಾಡುತ್ತಿದ್ದ ಏರ್ ಪ್ರಯಾಣಿಕರನ್ನ ಬಂಧಿಸಿ, ರೂ.2 ಕೋಟಿ ಮೌಲ್ಯದ 3,311 ಗ್ರಾಂ ಚಿನ್ನವನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
2023ರ ಡಿ.23, 25, 29 ರಂದು ಕೌಲಾಲಂಪುರ, ಜೆಡ್ಡಾ, ಶಾರ್ಜಾ ಮತ್ತು ಬ್ಯಾಂಕಾಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ 5 ಮಂದಿ ಪುರುಷರು ಮತ್ತು 11 ಮಹಿಳೆಯರನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ಸಾಕ್ಸ್, ಉಡುಪುಗಳು, ಪ್ಯಾಂಟ್ ಪಾಕೆಟ್ಗಳು, ಒಳ ಉಡುಪುಗಳು ಮತ್ತು ಕರವಸ್ತ್ರಗಳಲ್ಲಿ ಮರೆಮಾಚಿ ರೂ.2 ಕೋಟಿ ಮೌಲ್ಯದ 3,311 ಗ್ರಾಂ ಚಿನ್ನವನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪ್ರಯಾಣಿಕರನ್ನ ಬಂಧಿಸಿ, ಚಿನ್ನವನ್ನ ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.