ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಫೋಟ ಸಂಭವಿಸಿದ್ದರಿಂದ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. 8 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಶಿವಕುಮಾರ್-ಸಿಇ, ಸಂತೋಷ್ ಕುಮಾರ್-ಇಇ, ವಿಜಯಲಕ್ಷ್ಮಿ-ಇಇ, ಶ್ರೀಧರ್-ಎಇಇ, ಜ್ಯೋತಿ-ಜೆಇ, ಶ್ರೀನಿವಾಸ್-ಜೆಇ, ಮನೋಜ್-ಕಂಪ್ಯೂಟರ್ ಆಪರೇಟರ್, ಕಿರಣ್-ಇಇ, ಸಿರಾಜ್-ಎಫ್‌ಡಿಎ ಗಾಯಗೊಂಡವರು. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಗೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಭೈರತಿ ಸುರೇಶ್ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಜೆ ಜಾರ್ಜ್, ಘಟನೆಯಾದ ನಂತರ ಎಲ್ಲರನ್ನೂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಎಲ್ಲರೂ ಔಟ್ ಆಫ್ ಡೇಂಜರ್ ನಲ್ಲಿದಾರೆ, ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದರು.
ಉದ್ದೇಶ ಪೂರ್ವಕವಾಗಿ ನಡೆದಿರೋ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ತನಿಖೆ ನಡೀತಿದೆ.. ಪೊಲೀಸ್ ನವರು, ಫೋರೆನ್ಸಿಕ್ ಸಿಬ್ಬಂದಿ ತನಿಖೆ ನಡೆಸ್ತಿದ್ದಾರೆ. ತನಿಖೆ ನಂತರ ಎಲ್ಲಾ ಮಾಹಿತಿ ಹೊರ ಬರುತ್ತೆ ಎಂದಿದ್ದಾರೆ.
ನನಗೆ ಇರೋ ಮಾಹಿತಿ ಪ್ರಕಾರ ಬರೀ ಲ್ಯಾಬ್ ಗೆ ಬೆಂಕಿ ಬಿದ್ದಿದೆ. ಲ್ಯಾಬ್ ನಲ್ಲಿ ಕೆಲವು ಕೆಮಿಕಲ್ಸ್ ಇತ್ತು, ಟೆಸ್ಟ್ ನಡೆಸೋ ವೇಳೆ ಬೆಂಕಿ ಅವಘಢ ಸಂಭವಿಸಿದೆ. ತನಿಖೆ ನಂತರ ಅಸಲಿ ವಿಚಾರ ಹೊರ ಬರುತ್ತೆ ಎಂದರು.
ಅಗ್ನಿ ಅನಾಹುತ ನಡೆದ ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡದ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದರು.