ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕೆಲಸವು ಸುಲಭವಲ್ಲ ಏಕೆಂದರೆ ಅವರು ಕಠಿಣ ಹವಾಮಾನವನ್ನು ಎದುರಿಸಬೇಕಾಗುತ್ತದೆ, ಅದು ಸುಡುವ ಬಿಸಿಯಾಗಿರಲಿ ಅಥವಾ ಕೊರೆಯುವ ಚಳಿಯಿರಲಿ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಸ್ಕೂಟಿಯಲ್ಲಿ ನಗರದಲ್ಲಿ ಸಂಚರಿಸಿ, ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ನೀರಿನ ಬಾಟಲಿಗಳನ್ನು ತಲುಪಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
ಇವರ ಹೆಸರು ಸೈಯದ್ ಮುಜೀಬ್, ವಯಸ್ಸು 60 ವರ್ಷ, ಸುಡುವ ಬಿಸಿಲಿನಲ್ಲಿ ನಿಂತು ವಾಹನ ದಟ್ಟಣೆ ನಿಯಂತ್ರಿಸುವ ಟ್ರಾಫಿಕ್ ಪೊಲೀಸರಿಗೆ ನೀರಿನ ಬಾಟಲಿಗಳನ್ನು ಕೊಟ್ಟು ದಾಹವನ್ನ ತೀರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ಪ್ರೀತಿಯಿಂದ ‘ನೀರ್ ಸಾಬ್/ವಾಟರ್ ಮ್ಯಾನ್’ ಎಂದು ಪೊಲೀಸರು ಕರೆಯುತ್ತಾರೆ.
ಬೆಂಗಳೂರು ಸಂಚಾರ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರು ಇವರ ಸೇವೆಯನ್ನ ಗುರುತಿಸಿ ಪ್ರಶಂಸಿದ್ದಾರೆ.