ಬೆಂಗಳೂರು ಸೇರಿದಂತೆ ಇತರೆಡೆ ರಾತ್ರಿ ಸುರಿದ ಮಳೆಗೆ ನಗರದ ಬಹುತೇಕ ರಸ್ತೆ, ಅಂಡರ್ ಪಾಸ್ ಜಲಾವೃತಗೊಂಡಿದೆ. ರಸ್ತೆಗಳಲ್ಲಿ ದೊಡ್ಡಮಟ್ಟದಲ್ಲಿ ನೀರು ಶೇಖರಣೆಯಾಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಹೆಬ್ಬಾಳ ಫೈಓವರ್ ಕೆಳಗೆ ಅಳ ಎತ್ತರಕ್ಕೆ ನಿಂತಿದ್ದ ಮಳೆ ನೀರು. ತಡರಾತ್ರಿ 12 ಗಂಟೆ ಸುಮಾರಿಗೆ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಸಂಚಾರಿ ಪೊಲೀಸ್ ಕಾನ್ ಸ್ಟೇಬಲ್ ನಿಂತಿದ್ದ ನೀರನ್ನ ತೆರವು ಗೊಳಿಸುವು ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪೊಲೀಸ್ ಕಾನ್ಸ್ ಟೇಬಲ್ ಕಾರ್ಯಕ್ಕೆ ಪೊಲೀಸ್ ಕಮಿಷನರ್ ದಯಾನಂದ್ ಟ್ಟೀಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.