
ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದ ಬುಲೆಟ್ ರಘು ಕೊಲೆಯಾದ ವ್ಯಕ್ತಿ. ಈತ ಕಳೆದ ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ಖಾನಾವಳಿ ಇಟ್ಟುಕೊಂಡು, ಲವ್ ಮಾಡಿ ಮದುವೆ ಮಾಡಿಕೊಂಡು ಬೆಳಗಾವಿಯಲ್ಲೇ ವಾಸವಿದ್ದ. ಬೆಳಗಾವಿಯಿಂದ ಒಂದು ವಾರದ ಹಿಂದಷ್ಟೇ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಈ ಹಿಂದೆ ಇಬ್ಬರ ಜೊತೆ ಗಲಾಟೆ ಮಾಡಿಕೊಂಡಿದ್ದನು. ಆ ಗಲಾಟೆ ವಿಷಯ ರಾಜಿ ಸಂಧಾನವಾಗಿತ್ತು. ನಿನ್ನೆ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ನಾನು ಸ್ನೇಹಿತರ ಜೊತೆ ಹೊರಹೋಗುತ್ತೇನೆಂದು ತನ್ನ ತಾಯಿಗೆ ಹೇಳಿ ಹೋಗುತ್ತಾನೆ. ಮನೆಯಿಂದ ಹೊರ ಹೋದವನು ಕೊಲೆಯಾಗಿದ್ದಾನೆ. ಸದ್ಯ ಈತನ ಫ್ರೆಂಡ್ಸ್ ಯಾರು ಎಂಬುದು ತಿಳಿದುಬಂದಿಲ್ಲ. ಕೊಲೆಗೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿದೆ ಎಂದು ಎಎಸ್ಪಿ ನಾಗರಾಜು ತಿಳಿಸಿದ್ದಾರೆ.

ಹಾಲೋ ಬ್ರಿಕ್ಸ್ ನಿಂದ ತಲೆಗೆ ಹೊಡೆದು ನಡು ರಸ್ತೆಯಲ್ಲಿಯೇ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿಯ ಹೋಟೆಲ್ ಜೆಪಿ ಪ್ಯಾಲೆಸ್ ಬಳಿ ಬುಧವಾರ ರಾತ್ರಿ ಸುಮಾರು 12ಗಂಟೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬುಲೆಟ್ ರಘು (38) ಎಂದು ಗುರುತಿಸಲಾಗಿದೆ.
ಸದ್ಯ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ವ್ಯಕ್ತಿ ಮೇಲೆ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ….

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….