ಬುಲೆಟ್ ಬೈಕ್ ಮತ್ತು ಲಾನ್ಸರ್ ಕಾರಿನ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವುನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳನ್ನು ಕೂಡಲೇ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರದೀಪ್ (40) ಮೃತ ದುರ್ದೈವಿ. ರೋಹಿತ್ ಠಾಕುರ್ ಗಾಯಾಳು ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಘಟನೆ ಯಲಹಂಕ – ದೊಡ್ಡಬಳ್ಳಾಪುರ ರಸ್ತೆಯ ಸೆಂಚುರಿ ಇಡನ್ ಮುಂದೆ ಇರುವ ಹೊಸಹುಡ್ಯಾ ಗೇಟ್ ಬಳಿ ತಡರಾತ್ರಿ ಸುಮಾರು 1:30ರಲ್ಲಿ ನಡೆದಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.