ಬುರ್ಖಾ ಧರಿಸಿ ಮಾರುವೇಶದಲ್ಲಿ ಬಂದು ಸ್ವಂತ ಚಿಕ್ಕಮ್ಮಳ ಚಿನ್ನಾಭರಣವನ್ನು ಕಳುವು: ಕದ್ದ ಚಿನ್ನಾಭರಣ ಮಾರಾಟ ಮಾಡಿ ಮೊಮ್ಮಗಳಿಗೆ ಎರಡು ಚಿನ್ನದ ಓಲೆ ಖರೀದಿ

ಬುರ್ಖಾ ಹಾಕಿಕೊಂಡು ಮಾರುವೇಶದಲ್ಲಿ ಬಂದು ಒಂಟಿಯಾಗಿ ವೃದ್ಧೆ ಮನೆಯಲ್ಲಿದ್ದಾಗ, ಆಕೆಯ ಕುತ್ತಿಗೆಯಿಂದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಖದೀಮ. ಸಿಸಿಟಿವಿ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಕಳಿಸಿದ ಘಟನೆ ವಿರಾಜಪೇಟೆಯಲ್ಲಿ ಮೇ 21ರಂದು ನಡೆದಿದ್ದು, ಇದೀಗ ತಡವಾಗಿ ಇದೀಗ ಬೆಳಕಿಗೆ ಬಂದಿದೆ.

ವಿರಾಜಪೇಟೆ -ಅಮ್ಮತ್ತಿ ರಸ್ತೆಯ ಕೊಮ್ಮೆತೋಡು (ಐಮಂಗಲ ಗ್ರಾಮ) ಎಂಬಲ್ಲಿ ಟೀ ಅಂಗಡಿ ಮಾಲೀಕ, ಅಲ್ಲಿಯ ಮಸೀದಿಯ ಆಡಳಿತ ಮಂಡಳಿಯ  ಸದಸ್ಯನಾಗಿದ್ದ ಕೋಳುಮಂಡ ಹ್ಯಾರಿಸ್ ಎಂಬ ವ್ಯಕ್ತಿ ಮೇ.21ರ ಸಂಜೆ ವಿರಾಜಪೇಟೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ತನ್ನ ಸಹೋದರ ಇಬ್ರಾಹಿಂ ರವರ ಮನೆಯಲ್ಲಿರುವ 80 ವರ್ಷದ ವೃದ್ದೆ, ತನ್ನ ತಂದೆಯ ತಂಗಿಯ (ಸೋದರತ್ತೆ) ಮನೆಗೆ ಬುರ್ಖ ಹಾಕಿಕೊಂಡು ಕೊಡೆ ಹಿಡಿದುಕೊಂಡು ಹೆಂಗಿಸಿನ ಚಪ್ಪಲಿ ಧರಿಸಿ ಮಾರುವೇಷದಲ್ಲಿ ಬಂದು ಒಬ್ಬಂಟಿಯಾಗಿದ್ದಾಗ, ಮನೆಗೆ ನುಗ್ಗಿ ಮೂರು ಪವನಿನ ಚಿನ್ನವನ್ನು ಕಸಿದುಕೊಂಡು ಪರಾರಿಯಾಗಿ ನಂತರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೂಲಕ ನಡೆದುಕೊಂಡು ಬಂದು ಟೆಂಡರ್ ಚಿಕ್ಕನ್ ಮುಂಭಾಗ ತನ್ನ ಕಾರಿನಲ್ಲಿ ಪರಾರಿಯಾಗಿದ್ದ ಹ್ಯಾರಿಸ್ ನನ್ನು ಕೃತ್ಯ ನಡೆದ ಒಂದೆರಡು ದಿನಗಳ ಬಳಿಕ ಪೊಲೀಸರು ಸಿಸಿಟಿವಿ ಮೂಲಕ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ನಡೆದಿದೆ.

ಆರೋಪಿ ಹ್ಯಾರಿಸ್ ಚಿನ್ನವನ್ನು ಇರಿಟಿಯ ಚಿನ್ನಾಭರಣ ಮಳಿಗೆಗೆ ಮಾರಿದ ಹಣದಲ್ಲಿ ತನ್ನ ಮೊಮ್ಮಗಳಿಗೆ ಎರಡು ಚಿನ್ನದ ಓಲೆಯನ್ನು ಖರೀದಿಸಿದ್ದನ್ನು ತನಿಖೆ ವೇಳೆ ಬಹಿರಂಗಗೊಳಿಸಿದ್ದಾನೆ. ಆರೋಪಿಯು ಕೃತ್ಯವೆಸಗಿ ಸೋದರತ್ತೆಯ ಚಿನ್ನಾಭರಣವನ್ನು ತನ್ನ ಕೈವಶಗೊಳಿಸಿದ ನಂತರ ಅದೇ ದಿನ ಸಂಜೆ ಬಿಟ್ಟಂಗಾಲ- ಹಾತೂರು- ಬೈಗೋಡು ರಸ್ತೆ  ಮೂಲಕವಾಗಿ ತನ್ನ ಕಾರಿನಲ್ಲಿ  ಕೊಮ್ಮೆತೋಡುವಿನ ತನ್ನ ಮನೆಗೆ ಸೇರಿಕೊಂಡಿದ್ದನ್ನು, ಈ ದಾರಿ ಮಧ್ಯೆ ಬುರ್ಖವನ್ನು ಮತ್ತು ಚಪ್ಪಲಿಯನ್ನು ಕೂಡ ಎಸೆದಿದ್ದಾನೆ ಎಂಬುದನ್ನು ತನಿಖೆಯ ವೇಳೆ  ಬಾಯಿಬಿಟ್ಟಿದ್ದಾನೆ.

ಹಣಕ್ಕಾಗಿ ಇದೀಗ ಸ್ವಂತ ಸಂಬಂಧಿಕರು ಕೂಡ ಕಳ್ಳತನದ ದಾರಿ ಹಿಡಿಯುತ್ತಿದ್ದಾರೆ. ವಿರಾಜಪೇಟೆ  ಭಾಗದಲ್ಲಿ ಗಂಡಸು ಬುರ್ಖಾ ಧರಿಸಿ ಸಿನಿಮಯ ರೀತಿಯಾಗಿ  ಕಳವು ನಡಿಸಿರುವುದು ಇದು ಪ್ರಥಮ ಎನ್ನಲಾಗಿದೆ.

Leave a Reply

Your email address will not be published. Required fields are marked *