ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ. ಅದೇ ಸಂತೋಷ ಕೂಟದ ಭಾಗವಾಗಿರುವ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣಕ್ಕೂ ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ!. ಬಿಜೆಪಿ ಪಕ್ಷ ವಿಜಯೇಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?. ವಿಜಯೇಂದ್ರ ಕೇವಲ BSY ಬಣಕ್ಕೆ ಮಾತ್ರ ಅಧ್ಯಕ್ಷರೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.