ಬಿರುಗಾಳಿ ಸಹಿತ ಜೋರು ಮಳೆ: ಧರೆಗುರುಳಿದ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ

ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ…

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ ಕೆಸ್ತೂರು ಪಂಚಾಯಿತಿ ವ್ಯಾಪ್ತಿಯ ಹೊನ್ನಾಘಟ್ಟ ಗ್ರಾಮದಲ್ಲಿ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು ಧರೆಗುರುಳಿವೆ… ಇದರಿಂದಾಗಿ ಜನ ಜೀವಭಯದಲ್ಲಿ ರಾತ್ರಿ ಕಳೆಯುವಂತಾಗಿದೆ….

ಭಾರೀ ಅನಾಹುತ ಸಂಭವಿಸುವುದಕ್ಕಿಂತ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಧರೆಗುರುಳಿದ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ) ಗಳನ್ನು ತೆರವುಗೊಳಿಸಬೇಕೆಂದು ಕೆಸ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೃತಿ ಮಂಜುನಾಥ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ…

ಇದರ ಜೊತೆಗೆ ಜಾಲಪ್ಪ ಕಾಲೇಜು ರಸ್ತೆಯಲ್ಲಿ ನಾಲ್ಕೈದು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ ಎಂದು ತಿಳಿದುಬಂದಿದೆ….

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…..

Leave a Reply

Your email address will not be published. Required fields are marked *

error: Content is protected !!