ಬಿಬಿಎಂಪಿ ಕಸದ ಲಾರಿಗೆ ಮತ್ತೆರೆಡು ಬಲಿ

 

 

 

 

 

 

 

 

ಬಿಬಿಎಂಪಿ ಕಸದ ಲಾರಿ ಹಾಗೂ ಬೈಕ್ ನಡುವೆ ಅಪಘಾತ, ಘಟನೆಯಲ್ಲಿ ಬೈಕ್ ನಲ್ಲಿದ್ದ ತಾಲೂಕಿನ ಮರಳುಕುಂಟೆ ಗ್ರಾಮದ ಇಬ್ಬರು ಯುವಕರ ಸಾವನ್ನಪ್ಪಿರುವ ಘಟನೆ ತುಮಕೂರು-ದಾಬಸ್ಪೇಟೆ ಹೆದ್ದಾರಿಯ ಹುಲಿಕುಂಟೆ ಗ್ರಾಮದ ಬಳಿ ಘಟನೆ ನಡೆದಿದೆ. ಮಾರುತಿ (28), ಮಹೇಶ್(30) ಘಟನೆಯಲ್ಲಿ ಮೃತಪಟ್ಟವರು.

ತಾಲೂಕಿನ ಚಿಗರೇನಹಳ್ಳಿ ಬಳಿಯಿರುವ ಬಿಬಿಎಂಪಿ ಕಸದ ಎಂಎಸ್ ಜಿಪಿ ಘಟಕಕ್ಕೆ ಕಸವನ್ನು ಡಂಪ್ ಮಾಡಿ ವಾಪಸ್ ಹೋಗುತ್ತಿದ್ದ ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಮಧುರೆಯಲ್ಲಿ ಶನಿಮಹಾತ್ಮ ಸ್ವಾಮಿಯ ದರ್ಶನ ಮುಗಿಸಿ ಮುಡಿಕೊಟ್ಟ ಯುವಕರು ವಾಪಸ್ ಸ್ವಗ್ರಾಮಕ್ಕೆ ಬರುವಾಗ ದುರ್ಘಟನೆ ನಡೆದಿದೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಬಿಬಿಎಂಪಿ ಕಸದ ಲಾರಿಗೆ ಓರ್ವ ಯುವಕ ಬಲಿಯಾಗಿದ್ದ. ಸ್ಥಳಕ್ಕೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆ ಸಿಬ್ಬಂದಿ ದೌಡು ಪರಿಶೀಲನೆ. ಅಪಘಾತವೇಸಗಿ ಲಾರಿ ಸಮೇತ ಪರಾರಿಯಾಗುತ್ತಿದ್ದ ಲಾರಿ ಚಾಲಕನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಭೇಟಿ,‌ ಪರಿಶೀಲನೆ ನಡೆಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಬಿಬಿಎಂಪಿ ಕಸದ ಲಾರಿ ಚಾಲಕರ ಬೇಜವಾಬ್ದಾರಿತನಕ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪದೇ ಪದೇ ಇಂತಹ‌ ಘಟನೆಗಳು ಮರುಕಳಿಸುತ್ತಿರುವುದನ್ನು ಖಂಡಿಸಿ ಬಿಬಿಎಂಪಿಯ ಎಂಎಸ್ ಜಿಪಿ ಘಟಕ ಮುಚ್ಚುವಂತೆ ಒತ್ತಾಯಿಸಿದರು.

 

Leave a Reply

Your email address will not be published. Required fields are marked *