
ಬಿಡಿಸಿಸಿ ಬ್ಯಾಂಕ್ ನಲ್ಲಿ ಕುರಿ, ಮೇಕೆ, ಹಸುಗಳಿಗೆ ಸಾಲ ನೀಡುತ್ತಿದ್ದೇವೆ. ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚುಂಚೇಗೌಡ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ವಿವಿದ್ದೋದ್ದೇಶ ಪ್ರಾರ್ಥಮಿಕ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಘದ ಎಲ್ಲಾ ರೈತರಿಗೂ ಸಾಲ ಸೌಲಭ್ಯ ಇದೆ. ಎಲ್ಲರೂ ಸಾಲವನ್ನು ತೆಗೆದುಕೊಂಡು ಸಕಾಲಕ್ಕೆ ತಿರುಗಿಸಿ ಸಂಘವನ್ನು ಬೆಳೆಸಬೇಕಾಗಿದೆ. ಈ ಸಂಘಕ್ಕೆ ಮೂರು ಲಕ್ಷ ಲಾಭ ಬಂದಿದ್ದು, ಸಂಘವನ್ನು ಇನ್ನು ಚೆನ್ನಾಗಿ ಬೆಳೆಸಬೇಕು ಎಂದು ಹೇಳಿದರು.
ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಂಗಪ್ಪ ಮಾತನಾಡಿ, ಸಂಘ ಪ್ರಾರಂಭ ಆದಾಗಿನಿಂದ ಅಚ್ಚುಕಟ್ಟಾಗಿ ಬೆಳೆದುಕೊಂಡು ಬಂದಿದೆ. ಅದರಲ್ಲಿ ರೈತರ ಪಾಲು ಹೆಚ್ಚಾಗಿದೆಮ ಅಧ್ಯಕ್ಷರಾಗಲಿ, ಸದಸ್ಯರಾಗಲಿ, ಉಪಾಧ್ಯಕ್ಷರಾಗಲಿ ಸಂಘದಲ್ಲಿ ಉತ್ತಮವಾದ ಕೆಲಸ ಮಾಡಿಕೊಂಡು ಸಂಘವನ್ನು ಉನ್ನತಕ್ಕೆ ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ಮಾತನಾಡಿ, ಸಂಘ ಪ್ರಾರಂಭವಾಗಿ ಮೂರು ವರ್ಷಗಳಲ್ಲಿ ಸಂಘವನ್ನು ಅಭಿವೃದ್ಧಿಪಡಿಸಿದ್ದೇವೆ, ಸಂಘಕ್ಕೆ ಮೂರು ಲಕ್ಷ ಲಾಭ ಬಂದಿದ್ದು, ಮುಂದಿನ ವರ್ಷ ಇನ್ನೂ ಲಾಭ ಬರುವ ನಿರೀಕ್ಷೆ ಇದೆ. ಸಂಘಕ್ಕೆ ಸ್ವಂತ ಕಟ್ಟಡ ಬೇಕಾಗಿರುವುದರಿಂದ ನಮಗೆ ಸ್ವಂತ ಕಟ್ಟಡ ಬೇಕೆಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಲ್ಲಿ ಮನವಿ ಮಾಡಿದ್ದೇವೆ, ಆದಷ್ಟು ಬೇಗ ಕಟ್ಟಡ ಆಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
2024-25 ನೇ ಜಮ ಖರ್ಚ ವೆಚ್ಚವನ್ನು ವಾರ್ಷಿಕ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಮಂಡಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ನಂಜೇಗೌಡ, ಮೇಳೆಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಿದಾನಂದ, ವಿವಿದ್ದೋದ್ದೇಶ ಪ್ರಾರ್ಥಮಿಕ ಸಹಕಾರ ಸಂಘದ ಉಪಾಧ್ಯಕ್ಷ ಅನುಸೂಯ ಶೆಟ್ಟಪ್ಪ, ಮಾಜಿ ಅಧ್ಯಕ್ಷ ಮುನೇಗೌಡ, ಸಂಘದ ನಿರ್ದೇಶಕ ವಿಜಯಕುಮಾರ್, ಪಿಳ್ಳಪ್ಪ ಹನುಮಂತರಾಯಪ್ಪ, ಮುನಿರಾಜು, ರಾಮ ನಾಯ್ಕ್, ಲೋಕನಾಥ್, ಗಂಗಲಕ್ಷ್ಮಮ್ಮ ಮನಿರಾಜು ಹಾಗು ಕಾಂಗ್ರೆಸ್ ಮುಖಂಡರಾದ ಸವಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.