ಬಿಟ್ ಕಾಯಿನ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ರಚನೆ ಮಾಡಲು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಈ ಕುರಿತು ಕಾಟನ್ ಪೇಟೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಜಾಲ ಇರುವ ಸಂಶಯ ಇದೆ. ಜೊತೆಗೆ ಹ್ಯಾಕರ್ ಗಳು ಇದರಲ್ಲಿ ಇನ್ವಾಲ್ವ್ ಆಗಿದ್ದಾರೆ. ಹೀಗಾಗಿ ಹೆಚ್ಚಿನ ತನಿಖೆ ಆಗಬೇಕು ಎಂಬ ಅಭಿಪ್ರಾಯ ಇತ್ತು ಹಾಗಾಗಿ ಎಸ್ ಐಟಿಯಿಂದ ವಿಶೇಷ ತನಿಖೆ ಮಾಡಿಸಲು ಮನವಿ ಮಾಡಲಾಗಿದೆ. ಈ ಕುರಿತು ಡಿಜಿ ಮತ್ತು ಐಜಿ ಅವರು ಕೂಡ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರ ಯಾವ ತನಿಖಾ ಸಂಸ್ಥೆಗೆ ನೀಡುತ್ತದೆ ಅನ್ನೋದನ್ನ ನೋಡಬೇಕು ಎಂದರು.
ಸದ್ಯ ನಮ್ಮ ತನಿಖೆಯಲ್ಲಿ ದೋಷಾರೋಪ ಪಟ್ಟಿ ಹಾಕಲಾಗಿದೆ. ಆರೋಪಿಗಳು ಅತ್ಯಂತ ಚಾಲಕಿ ಕೆಲಸ ಮಾಡಿದ್ದಾರೆ. ಹಾಗಾಗಿ ಪರಿಣಿತರು ಇರೋ ವಿಶೇಷ ತನಿಖಾ ದಳಕ್ಕೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.