ಬಿಜೆಪಿ ಸುಳ್ಳು, ಕಾಂಗ್ರೆಸ್ ಸತ್ಯ- ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ

ಬಿಜೆಪಿಯಿಂದ ನಗರದ ಕಚೇರಿಪಾಳ್ಯ ವಾರ್ಡ್ ಗೆ ಕೊಡುಗೆ ಏನು? ಬಿಜೆಪಿ ಎಂದರೆ ಸುಳ್ಳು, ಸುಳ್ಳು ಎಂದರೆ ಬಿಜೆಪಿ ಕೇವಲ ಭರವಸೆ ಮಾತ್ರ ಕೊಡುವ ಪಕ್ಷ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ‌ಲೇವಡಿ.

ಹತ್ತು ವರ್ಷದ ಹಿಂದೆ ಕಚೇರಿಪಾಳ್ಯ ಹೇಗಿತ್ತು ಈಗ ನಾನು ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ಇದೆ. ಈ ವಾರ್ಡ್ ನ ಪ್ರತಿ ಬೀದಿಗೆ ರಸ್ತೆ ಭಾಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಮಾಡಲಾಗಿದೆ ಎಂದರು.

ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ, ಅಭಿವೃದ್ಧಿ ಮುಂದುವರಿಸಿಕೊಂಡು ಬಂದಿದ್ದೇನೆ, ಬಿಜೆಪಿಯೇ ಭರವಸೆ ಬೆಳಕು‌‌ ಎಂದು ಜನರನ್ನು ಮರಳು ಮಾಡುತ್ತಿದ್ದಾರೆ. ಬಿಜೆಪಿ ಭರವಸೆ ಬೆಳಕು ಅಲ್ಲ ಅದು ಕತ್ತಲು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಬಡವರಿಗೆ ದೀನ ದಲಿತರಿಗೆ, ಹಿಂದುಳಿದವರಿಗೆ ಸಮಾನ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆ, ನೀಡಲಾಗುವುದು, ಬಿಜೆಪಿ ಸರ್ಕಾರ ಅಧಿಕಾರಿಕ್ಕೆ ಬಂದರೆ ಸುಳ್ಳು ಭರವಸೆ, ಬೆಲೆ ಏರಿಕೆ, ಜಿಎಸ್ ಟಿ, ಅಶಾಂತಿ, ಭ್ರಷ್ಟಾಚಾರ ಇರುತ್ತದೆ ಎಂದು ತಿಳಿಸಿದರು.

ನಂತರ ‌ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್ ಮಾತನಾಡಿ, ಬಿಜೆಪಿ‌ಯ ಎಲ್ಲಾ ಭರವಸೆ ಇದೂವರೆಗೂ ಈಡೇರಿಲ್ಲ, ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ಭರವಸೆ ಈಡೇರಿಸುವಲ್ಲಿ ನಿರತವಾಗಿದೆ ಎಂದರು.

ಬಿಜೆಪಿ ಯೋಜನೆಯಿಂದ ಬಡತನ ನಿರ್ಮೂಲನೆ ಆಗೋದಿಲ್ಲ, ಬದಲಿಗೆ ಬಡವರು ನಿರ್ಮೂಲನೆ ಆಗುತ್ತಿದೆ. ಕೇವಲ ಆದಾನಿ, ಅಂಬಾನಿಯರನ್ನ ಬೆಳೆಸುತ್ತಿರುವ ಬಿಜೆಪಿ, ಇಡೀ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಇದರಿಂದ ದೇಶದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ನಡೆ ನೋಡಿ ಹಿರಿಯ, ಮೂಲ ಬಿಜೆಪಿ ನಾಯಕರು ಪಕ್ಷ ತೊರೆಯುತ್ತಿದ್ದಾರೆ, ಬುದ್ದಿವಂತ, ಕ್ಲೀನ್ ಹ್ಯಾಂಡ್ ಇರುವವರನ್ನು ಪಕ್ಷದಲ್ಲಿ ಇರಿಸಿಕೊಳ್ಳುವುದಿಲ್ಲ, ಯಾರು ಅವರ ಮಾತನ್ನು ತಲೆ ತಗ್ಗಿಸಿ ಕೇಳಿಕೊಂಡು ಇರುತ್ತಾರೋ ಅಂತಹವರನ್ನು ಪಕ್ಷದಲ್ಲಿ ಉಳಿಯುತ್ತಾರೆ ಎಂದರು.

ಬಿಜೆಪಿ ಮತ್ತು ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ ಕಾರ್ಯಕರ್ತರು.

ಈ ವೇಳೆ ಮಾತನಾಡಿದ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮತ್ತು ಉಚಿತ 200 ಯೂನಿಟ್ ವಿದ್ಯುತ್ ಯೋಜನೆಗಳು ಜನಪರವಾಗಿದ್ದು ಆ ಕಾರಣಕ್ಕೆ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದು, ಬಿಜೆಪಿಯ ಅವದಿಯಲ್ಲಿ ಎಸ್ಸಿ ಎಸ್ಟಿ ಗಳಿಗೆ ನೇಕಾರರಿಗೆ ಯಾವುದೇ ಪ್ತಯೋಜನವಾಗಲಿಲ್ಲ, ಎಲ್ಲಾ ಜನಾಂಗದ ವಿದ್ಯಾರ್ಥಿ ವೇತನಗಳನ್ನು ಕಡಿತ ಮಾಡಿದರು, ನೇಕಾರರಿಗೆ ನೀಡುವ ಮಗ್ಗಗಳ ಮೇಲೂ ಜಿಎಸ್ಟಿ ಕಟ್ಟಬೇಕು ಎಂಬ ಕಾಯ್ದೆ ತಂದು ನೇಕಾರರಿಗೂ ದ್ರೋಹ ಬಗೆದರು ಎಂದು‌ ಆರೋಪಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ರೂಪಿಣಿ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಜಿ.ಸೋಮರುದ್ರಶರ್ಮ, ನಗರ ಬ್ಲಾಕ್ ಕಾರ್ಯಾದ್ಯಕ್ಷ‌ ಅಂಜನಮೂರ್ತಿ, ಟಿ.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ನಾರನಹಳ್ಳಿ ಗೋವಿಂದರಾಜು, ಮುನಿರಾಜು, ಸೇವಾದಳದ ಕಾಂತರಾಜು, ಮದ್ದೂರಪ್ಪ. ರಾಮಾಂಜಿನಪ್ಪ

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ದಾಖಲೆಗಳಿಲ್ಲದೆ ವಾಸ: ಮೂವರು ವಿದೇಶಿ ಪ್ರಜೆಗಳ ವಶ

ದೊಡ್ಡಬಳ್ಳಾಪುರ: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರೆನ್ನಲಾದ ಮೂವರು ನೈಜೀರಿಯಾ…

1 hour ago

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

4 hours ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

4 hours ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

5 hours ago

ನೊಬೆಲ್ ಪ್ರಶಸ್ತಿ ಮತ್ತೆ ಮನಸ್ಸು ಮತ್ತು ಸಮಾಜ ಪುನ:ಶ್ಚೇತನಗೊಳ್ಳುವಂತೆ ಮಾಡಲಿ

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…

8 hours ago