2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕ್ಯೂಆರ್ ಕೋಡ್ ಉಳ್ಳ ನವ ದೊಡ್ಡಬಳ್ಳಾಪುರ ಹೆಸರಿರುವ ಕೂಪನ್ ವಿತರಣೆ.
ಕೂಪನ್ ವಿತರಣೆ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿ ಮೂವರನ್ನು ತಡೆದ ಗ್ರಾಮಸ್ಥರು ಎಫ್.ಎಸ್.ಟಿ ತಂಡದ ವಶಕ್ಕೆ ನೀಡಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣ ಬಳಿ ನಡೆದಿದೆ.
ವಶಕ್ಕೆ ಪಡೆದ ಮೂರು ಮಂದಿಯನ್ನು ಮಂಗಳೂರು ಮೂಲದವರು ಎಂದು ಗುರುತಿಸಲಾಗಿದೆ, ಹಲವು ತಂಡಗಳಾಗಿ, ತಾಲೂಕಿನಾದ್ಯಂತ ಗ್ರಾಮಗಳಿಗೆ ತೆರಳಿ RSS ವತಿಯಿಂದ ಬಂದಿದ್ದೇವೆ, ಬಿಜೆಪಿ ಅಭ್ಯರ್ಥಿ ಕಡೆಯವರು ಎನ್ನುತ್ತ, ಮತ ಚೀಟಿಯಲ್ಲಿನ ಮಾಹಿತಿಯುಳ್ಳ ಹಾಗೂ ಕ್ಯೂಆರ್ ಕೋಡ್ ಹೊಂದಿರುವ ನವ ದೊಡ್ಡಬಳ್ಳಾಪುರ ಹೆಸರಿನ ಕೂಪನ್ ವಿತರಿಸುತ್ತಿದ್ದರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಡಿ.ರಾಜೇಶ್ವರಿ ನೇತೃತ್ವದ ಎಫ್.ಎಸ್.ಟಿ ತಂಡದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಹೊಸಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ತಿದ್ದಾರೆ.
ಬಂಧಿತರಿಂದ ಮತದಾರ ಪಟ್ಟಿ, ಹಾಗೂ ತಾಲೂಕಿನಾಧ್ಯಂತ ಕ್ಯೂಆರ್ ಕೋಡ್ ಕೂಪನ್ ವಶಕ್ಕೆ ಪಡೆಯಲಾಗಿದೆ.