ಕೋಲಾರ: ಬಿಜೆಪಿ ಪಕ್ಷದಂತೆ ಸುಳ್ಳು ಪಳ್ಳು ಹೇಳಿಕೊಂಡು ಗಿಮಿಕ್ ಮಾಡೋ ಪಕ್ಷ ಕಾಂಗ್ರೆಸ್ ಅಲ್ಲ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ಮಂಡಳಿ ಅಧ್ಯಕ್ಷ ಮತ್ತು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಹುತ್ತೂರು ಗ್ರಾಮದಲ್ಲಿ ಸೋಮವಾರ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಹೋಬಳಿ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಪಕ್ಷವು ಹತ್ತು ವರ್ಷಗಳ ಹಿಂದೆ ಘೋಷಣೆ ಮಾಡಿದ ಒಂದಾದರೂ ಗ್ಯಾರಂಟಿ ಜಾರಿ ಮಾಡಿದ್ದಾರಾ ನಾವು ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿ ಜನರ ವಿಶ್ವಾಸ ಗಳಿಸಿದ್ದೇವೆ ಇದಕ್ಕೆ ಕಾರಣ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಂದರು.
ಕಾಂಗ್ರೆಸ್ ಪಕ್ಷದ ಹತ್ತು ತಿಂಗಳ ಸಾಧನೆಗಳ ಜೊತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಯೋಜನೆಯ ಫಲಾನುಭವಿಗಳಾಗಿ ಮಾಡಬೇಕು ಇದಕ್ಕೆ ಪಂಚಾಯತಿ ಮಟ್ಟದಿಂದ ಗ್ರಾಮಗಳಲ್ಲಿ ಮಾಹಿತಿ ಪಡೆದು ಕೂಡಲೇ ನೋಂದಣಿ ಮಾಡಿಸಬೇಕು ಕಾಂಗ್ರೆಸ್ ಅಭಿವೃದ್ಧಿಯ ಜೊತೆಗೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸರಕಾರವಾಗಿದೆ ಎಂದರು.
ದೇಶದಲ್ಲಿ ಮೋದಿ ಸರಕಾರ ಬಂದ ನಂತರದಿಂದ ಪ್ರತಿಯೊಂದು ವಸ್ತುವಿನ ಮೇಲೆ ಟ್ಯಾಕ್ಸ್ ಹೆಚ್ಚಳ ಮಾಡಿದ್ದಾರೆ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಒಂದು ಕಡೆಯಾದರೆ ಸಾವಿರ ಕೋಟಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರ ಸಾಲಮನ್ನಾ ಮಾಡಿದ್ದಾರೆ ಬಡವರಿಗೆ ಟ್ಯಾಕ್ಸ್ ಕಟ್ಟಿಸಿದ್ದಾರೆ ಇದೇ ಬಿಜೆಪಿಯವರ ಸಾಧನೆ ಉಚಿತವಾಗಿ ನಿಮಗೆಲ್ಲ ಹಂಚಿಕೆ ಮಾಡಕ್ಕಾಗಿ ದುಡ್ಡು ಕೊಡತ್ತೇವೆ ಅಕ್ಕಿ ಕೊಡಿ ಎಂದರೆ ಕೊಡಲಿಲ್ಲ ಪುಣ್ಯಾತ್ಮ ನರೇಂದ್ರ ಮೋದಿ ಆದರೆ ಇವತ್ತು ಮೋದಿ ಅಕ್ಕಿ ಅಂತ ಕೆಜಿಗೆ 29 ರೂಪಾಯಿಗೆ ಮಾರಾಟ ಮಾಡಿ ಬಡವರ ಹೆಸರಿನಲ್ಲಿ ಸುಲಿಗೆ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಬಡವರು ಉದ್ದಾರವಾಗಿಲ್ಲ ಬರಿ ಶ್ರೀಮಂತರು ಅಷ್ಟೇ ಅಭಿವೃದ್ಧಿಯಾಗಿದ್ದಾರೆ ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಗೆ ಅಧ್ಯತೆಯಿಲ್ಲದೇ ಕೇವಲ ಶ್ರೀರಾಮ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ಬಿಜೆಪಿಗೆ ಶ್ರೀರಾಮ ಮಾತ್ರ ಬೇಕು ಕಾಂಗ್ರೆಸ್ ಪಕ್ಷಕ್ಕೆ ಜಾತಿ ಧರ್ಮವಿಲ್ಲದೇ ಎಲ್ಲಾ ದೇವತೆಗಳು ಬೇಕಾಗಿದೆ ಜಿಲ್ಲೆಯಲ್ಲಿ ಒಬ್ಬ ಐದು ವರ್ಷಗಳ ಕಾಲ ಜನರನ್ನು ಯಾಮಾರಿಸಿ ಎಂಪಿಯಾಗಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಬರೀ ಜಾತಿ ಧರ್ಮಗಳ ಮಧ್ಯೆ ಬೆಂಕಿ ಹಂಚಿದ್ದೇ ಅಯಿತು ಮುಂದೆ ಅಂತಹ ತಪ್ಪು ಮಾಡಿಕೊಳ್ಳದೇ ಯಾರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ನಮ್ಮ ಪಕ್ಷದ ಸಂಸದ ಆಯ್ಕೆಯಾಗುವಂತೆ ಮಾಡಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಹಾಗೂ ವಿವಿಧ ಇಲಾಖೆಗಳಲ್ಲಿ ಆಯ್ಕೆಯಾದವರಿಗೆ ಯಂತ್ರೋಪಕರಣಗಳನ್ನು ವಿತರಿಸಿದರು.
ವೇದಿಕೆಯಲ್ಲಿ ತಹಶಿಲ್ದಾರ್ ಹರ್ಷವರ್ಧನ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಹುತ್ತೂರು ಗ್ರಾಪಂ ಅಧ್ಯಕ್ಷೆ ವರಲಕ್ಷ್ಮೀ ಚಂದ್ರಪ್ಪ, ಷಾಪೂರು ಗ್ರಾಪಂ ಅಧ್ಯಕ್ಷ ರಾಮಕೃಷ್ಣೇಗೌಡ, ಮಾಜಿ ಅಧ್ಯಕ್ಷ ವಿಟ್ಟಪನಹಳ್ಳಿ ಕೋಟೆ ನಾರಾಯಣಸ್ವಾಮಿ, ತಾಲೂಕು ವೈದ್ಯ ಅಧಿಕಾರಿ ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ಬೆಂಕಿ ನಾಗರಾಜ್, ಮಲ್ಲಂಡಹಳ್ಳಿ ಬಾಬು, ನಡುಪಳ್ಳಿ ಸಂತೋಷ್, ಸಂಪತ್, ವೆಂಕಟೇಶ್, ಯಾರಂಘಟ್ಟ ಮುನಿರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.