ದೊಡ್ಡಬಳ್ಳಾಪುರ ನಗರ ಬಿಜೆಪಿ ಅಧ್ಯಕ್ಷರಾಗಿ ಕೆ.ಬಿ ಮುದ್ದಪ್ಪ ಮತ್ತು ಗ್ರಾಮಾಂತರ ಭಾಗದ ನೂತನ ಅಧ್ಯಕ್ಷರಾಗಿ ದರ್ಗಾಜೋಗಿಹಳ್ಳಿ ನಾಗೇಶ್ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಎ.ವಿ ನಾರಾಯಣಸ್ವಾಮಿ ಆದೇಶ ಹೊರಡಿಸಿದ್ದಾರೆ.
ನಗರಾಧ್ಯಕ್ಷರಾಗಿ ನೇಮಕವಾಗಿರುವ ಕೆ.ಬಿ ಮುದ್ದಪ್ಪ ನಗರಾಸಭಾ ಮಾಜಿ ಅಧ್ಯಕ್ಷರಾಗಿದ್ದಾರೆ. ಗ್ರಾಮಾಂತರ ಅಧ್ಯಕ್ಷ ನಾಗೇಶ್ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ.
ಈ ಹಿಂದೆ ನಗರಾಧ್ಯಕ್ಷರಾಗಿದ್ದ ಶಿವಶಂಕರ್ ಮತ್ತು ಗ್ರಾಮಾಂತರ ಅಧ್ಯಕ್ಷರಾಗಿದ್ದ ನಾಗರಾಜು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹೀಗಾಗಿ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ.