ಬಿಗಿ ಬೌಲಿಂಗ್ ದಾಳಿಗೆ ಲಂಕಾ ತತ್ತರ, ಫೈನಲ್ ಗೆ ಲಗ್ಗೆಯಿಟ್ಟ ಭಾರತ !

ಕೊಲಂಬೊದ ಆರ್. ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್ ಫೋರ್ ನ ಶ್ರೀಲಂಕಾ ಹಾಗೂ ಭಾರತದ ನಡುವಿನ ಪಂದ್ಯದಲ್ಲಿ ಬೌಲರ್ ಗಳು ಪಾರಮ್ಯವನ್ನು ಮೆರೆದರೂ ಸಹ ಕೊನೆಗೆ ವಿಜಯಲಕ್ಷ್ಮಿ ಭಾರತಕ್ಕೆ ಒಲಿಯುವ ಮೂಲಕ ಫೈನಲ್ ಪಂದ್ಯಕ್ಕೆ ಲಗ್ಗೆಯಿಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ ಉತ್ತಮ ಆರಂಭವನ್ನು ಪಡೆಯಿತು, ನಾಯಕ ರೋಹಿತ್ ಶರ್ಮಾ (53) ಹಾಗೂ ಆರಂಭಿಕ ಆಟಗಾರ ಶುಭ್ಮನ್ ಗಿಲ್ (19) ಉತ್ತಮವಾಗಿ ರನ್ ಗಳಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿದರು.

ಉತ್ತಮವಾಗಿ ಆಡುತ್ತಿದ್ದ ಭಾರತದ ಅಗ್ರ ಶ್ರೇಯಾಂಕಿತ ಆಟಗಾರರಾದ ಶುಭ್ಮನ್ ಗಿಲ್, ನಾಯಕ ರೋಹಿತ್ ಶರ್ಮಾ ಹಾಗೂ ಹಿರಿಯ ಆಟಗಾರ ವಿರಾಟ್ ಕೋಹ್ಲಿ ಅವರನ್ನು ಶ್ರೀಲಂಕಾದ ಯುವ ಆಟಗಾರ ಧುನಿತ್ ವೆಲ್ಲಲಗೆ ಪೆವಿಲಿಯನ್ ಗೆ ಕಳಿಸಿದರು.

ಮಧ್ಯಮ ಕ್ರಮಾಂಕದ ಆಟಗಾರರಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕನ್ನಡಿಗ ಕೆ.ಎಲ್. ರಾಹುಲ್ (39) ಹಾಗೂ ಇಶಾನ್ ಕಿಶನ್ (33) ರನ್ ಹಾಗೂ ಅಕ್ಷರ್ ಪಟೇಲ್ (26) ಗಳಿಸುವ ಮೂಲಕ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದರು, ಲಂಕಾದ ಪರವಾಗಿ ವೆಲ್ಲಲಗೆ ವಿಕೆಟ್ ಪಡೆದರೆ ಸ್ಪಿನ್ನರ್ ಅಸಲಂಕ 4 ವಿಕೆಟ್ ಪಡೆದು ಮಿಂಚಿದರು.

213 ರನ್ ಗುರಿ ಬೆನ್ನತ್ತಿದ್ದ ಲಂಕಾ ಉತ್ತಮ ಆರಂಭವನ್ನು ಪಡೆಯಲಿಲ್ಲ, ಆರಂಭಿಕ ಆಟಗಾರರಾದ ನಿಸಾಂಕ (6) ಅವರು ಬುಮ್ರಾಗೆ ವಿಕೆಟ್ ಒಪ್ಪಿಸಿದರೆ ಕರುಣಾರತ್ನೆ(2) ಸಿರಾಜ್ ಗೆ ಬಲಿಯಾದರು.

ಲಂಕಾದ ಪರವಾಗಿ ಧನಂಜಯ ಡಿಸಿಲ್ವಾ (41), ಧುನಿತ್ ವೆಲ್ಲಲಗೆ (42) ಹಾಗೂ ಅಸಲಂಕ(22) ರನ್ ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ, ಭಾರತದ ಪರವಾಗಿ ಸ್ಪಿನ್ನರ್ ಕುಲದೀಪ್ ಯಾದವ್ 4, ಅಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

Leave a Reply

Your email address will not be published. Required fields are marked *