ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಕಂಡಕ್ಟರ್ ನಿಂದ 25 ರೂಪಾಯಿಯನ್ನು ಹಿಂತಿರುಗಿಸದ ಕಾರಣ ಅಧಿಕೃತ ವೆಬ್ಸೈಟ್ ನಲ್ಲಿ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ದೂರು ನೀಡಿದ್ದರು.
ಗ್ರಾಹಕ ಗಿರೀಶ್ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಒಂದು ದಿನದ ಪಾಸ್ ಹಾಗೂ ಟೋಲ್ ದರ ಸೇರಿ ₹ 75 ಆಗಿದ್ದರೆ, ಕಂಡಕ್ಟರ್ ಗೆ ₹ 100 ಪಾವತಿಸಿ 25 ರೂಪಾಯಿ ಚೇಂಜ್ ಕೇಳಿದ್ದರು. ಆದಾಗ್ಯೂ, ಅವರು ತಮ್ಮ ಬಾಕಿ ಮೊತ್ತವನ್ನು ಹಿಂದಿರುಗಿಸದೇ ಕಂಡಕ್ಟರ್ ನಿರ್ಲಕ್ಷ್ಯ ತೋರಿದ್ದರು.
ಈ ಕುರಿತು ಬಿಎಂಟಿಸಿ ಅಧಿಕೃತ ವೆಬ್ಸೈಟ್ ನಲ್ಲಿ ದೂರು ನೀಡಿದ್ದರು. ದೂರು ನೀಡಿ ಒಂದು ತಿಂಗಳಲ್ಲಿ 25 ರೂಪಾಯಿ ಚಿಲ್ಲರೆಯನ್ನು ಹಿಂಪಡೆದಿದ್ದಾರೆ.