ಬಾಶೆಟ್ಟಿಹಳ್ಳಿ ವಿಎಸ್‍ಎಸ್‍ಎನ್ ಚುನಾವಣೆ: ಅಭ್ಯರ್ಥಿಗಳಿಗೆ ಕಿಡಿಗೇಡಿಗಳು ಪದ ಬಳಕೆಗೆ ಜನಧ್ವನಿ ವೇದಿಕೆ ಖಂಡನೆ

ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ವಿವಿದೋದ್ದೇಶ  ಸಹಕಾರ ಸಂಘದ ಚುನಾವಣೆ ಉಮೇದುವಾರರನ್ನು ಕಿಡಿಗೇಡಿಗಳು ಎಂದು ಕರೆದಿರುವ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯವಾಗಿದ್ದು, ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದ ಇವರು, ಸಂಘದ ಏಳಿಗೆಯ ಮನೋಭಾವವಿರುವವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಿಲ್ಲ ಎಂದು ಜನಧ್ವನಿ ವೇದಿಕೆಯ ಸದಸ್ಯರು ದೂರಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜನಧ್ವನಿ ವೇದಿಕೆಯ ಬಾಶೆಟ್ಟಿಹಳ್ಳಿ ಕೃಷ್ಣ ಮೂರ್ತಿ, ನಾರಾಯಣಸ್ವಾಮಿ, ಜ.19 ರಂದು ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆ ನಡೆಯಿತು. ಇಲ್ಲಿ ಚುನಾವಣೆಯು ನಡೆದು 30 ವರ್ಷಗಳು ಆಗಿದೆ. ಈಗಲೂ ಮೂರು ಪಕ್ಷಗಳು ಸೇರಿ ಅಪವಿತ್ರ ಮೈತ್ರಿಯೊಂದಿಗೆ, ರೈತರಿಗೆ ಯಾವುದೇ ಮಾಹಿತಿ ನೀಡದೇ  ಅವಿರೋಧ ಆಯ್ಕೆ ಎಂದು ಅವರಿಗೆ ಬೇಕಾದವರನ್ನೇ ಆಯ್ಕೆ ಮಾಡಲು ಹೋರಟಾಗ ಜನಧ್ವನಿ ವೇದಿಕೆಯ ಮುಖಂಡರು ಖಂಡಿಸಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಇದರ ಪರಿಣಾಮ ಚುನಾವಣೆ ನಡೆದು ಎನ್‍ಡಿಎ ಬೆಂಬಲಿತ ಅಭ್ಯರ್ಥಿಗಳು 9 ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 2 ಸದಸ್ಯರು ಜಯಗಳಿಸಿದ್ದಾರೆ. ಸಂಘದಲ್ಲಿ ಒಟ್ಟು ಮತದಾರರ ಸಂಖ್ಯೆ 242,ಅಷ್ಟೇ. ಸಂಘಕ್ಕೆ ಆಯ್ಕೆಯಾಗಲು ಹತ್ತಾರು ಲಕ್ಷಗಳು ಖರ್ಚು ಮಾಡಿ ಗೆಲ್ಲುವ ಅವಶ್ಯಕತೆ ಇತ್ತಾ. ಜನಧ್ವನಿ ವೇದಿಕೆಯಿಂದ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ನೀಡಿದ ಎಲ್ಲಾ ಮತಬಾಂಧವರಿಗೂ ತಮ್ಮ ಮೂಲಕ ವಂದನೆಗಳು ಅರ್ಪಿಸುತ್ತೇವೆ ಎಂದರು.

ಈ ಸಮಯದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಪ್ರೇಮ್ ಕುಮಾರ್, ಚುನಾವಣೆ ನಡೆಸಲು ಕಾರಣರಾದವರು ಕಿಡಿಕೇಡಿಗಳು ಎಂದು ಕರೆದಿದ್ದಾರೆ. ಇದು ಖಂಡನೀಯ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವವನ್ನು ಉಳಿಸುವ, ಗೌರವಿಸುವ ಹಾಗೂ ಘನತೆಯನ್ನು ಹೆಚ್ಚಿಸುತ್ತದೆ. ಆದರೆ, ಚುನಾವಣೆಗೆ ಸ್ಪರ್ಧಿಸುವುದು ಮತ್ತು ಮತದಾನ ಮಾಡುವುದನ್ನು ವಿರೋಧಿಸುವ ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಚುನಾವಣೆಯನ್ನು  ವಾಮಮಾರ್ಗದಲ್ಲಿ ಗೆದ್ದ ಇವರು ಮತ್ತೊಬ್ಬರನ್ನು ಕಿಡಿಗೇಡಿಗಳು ಎನ್ನಲು ಯಾವ ನೈತಿಕತೆ ಇದೆ.  ಹಲವಾರು ವರುಷಗಳಿಂದ ಏಳು ಊರಿನ ರೈತರುಗಳಿಗೆ ಮಾಹಿತಿ ನೀಡದೆ ಕತ್ತಲಲ್ಲಿ ಇಟ್ಟು ಸಂಘದ ಸದಸ್ಯತ್ವವನ್ನು ಹೆಚ್ಚು ಮಾಡದೆ ಕೇಲವೇ ಮತದಾರರನ್ನು ಉಳಿಸಿಕೊಂಡು ಅವಿರೋಧವಾಗಿ ಆಯ್ಕೆಯಾಗಲು ಸಂಚು ರೂಪಿಸುತ್ತಿದ್ದರು. ಇದನ್ನು ಗಮನಿಸಿದ ಜನಧ್ವನಿ ವೇದಿಕೆಯು ಇನ್ನು ಇರುವ ನೂರಾರು ರೈತರನ್ನು ಸಹಕಾರ ಸಂಘಕ್ಕೆ ಸದಸ್ಯರನ್ನಾಗಿಸಲು ಈ ಚುನಾವಣೆಯ ನಿರ್ಣಯವನ್ನು ತೆಗೆದುಕೊಂಡ ಕಾರಣ ವೇದಿಕೆಯನ್ನು ಕಿಡಿಗೇಡಿಗಳೆಂದು ಸಂಭೋಧಿಸಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ 30 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗಿ ತಮ್ಮ ನಿರ್ದೇಶಕರು ಸಂಘವನ್ನು ಅಭಿವೃದ್ಧಿ ಮಾಡಲು ರೈತರಿಗೆ ಸವಲತ್ತುಗಳನ್ನು ನೀಡಲು ಏನು ಪ್ರಯತ್ನಪಟ್ಟಿದ್ದಾರೆ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ ಎಂದರು.

ಈ ವೇಳೆ ರಾಜ್ಯ ಮತ್ತು ತಾಲೂಕು ವೇದಿಕೆ ಮುಖಂಡರಾದ ರಮೇಶ ಸಂಕ್ರಾಂತಿ,  ಮತ್ತು ಕೊನಘಟ್ಟ ಚಂದ್ರಪ್ಪ, ಕೆಸ್ತೂರು ಗಿರೀಶ್, ತಿಪ್ಪೂರು ನರಸಿಂಹ ಮೂರ್ತಿ, ಮತ್ತು  ರಾಮಮೂರ್ತಿ. ನಾಗದೇನಹಳ್ಳಿ ಚಂದ್ರಣ್ಣ ಏಕಾಶಿಪುರ ರಾಜಣ್ಣ , ಬಾಶೆಟ್ಟಹಳ್ಳಿ ಕೃಷ್ಣ ಮೂರ್ತಿ, ಸದಾನಂದ, ಅರಹಳ್ಳಿ ಗುಡದಹಳ್ಳಿ ವೆಂಕಟೇಶ, ಓಬದೇನಹಳ್ಳಿ ರಾಜೇಂದ್ರ ಎಳ್ಳುಪುರ ಮಹೇಶ, ಬೈರಸಂದ್ರ ಗಂಗಾದರ್, ಜಿಂಕೆಬಚ್ಚಹಳ್ಳಿ ದುರ್ಗೇಶ್ ಹಾಜರಿದ್ದರು.

Ramesh Babu

Journalist

Recent Posts

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…

2 hours ago

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…

9 hours ago

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

20 hours ago

ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…

21 hours ago

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…

21 hours ago

ಪೋಷಕರ ಗೌರವವೇ ಬದುಕಿನ ಮೊದಲ ಪಾಠ- ಸುರೇಶ್ ಗೌಡ ಬಿ

ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…

21 hours ago