ದೊಡ್ಡಬಳ್ಳಾಪುರ : ತಾಲೂಕಿನ ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆ ಉಮೇದುವಾರರನ್ನು ಕಿಡಿಗೇಡಿಗಳು ಎಂದು ಕರೆದಿರುವ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯವಾಗಿದ್ದು, ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದ ಇವರು, ಸಂಘದ ಏಳಿಗೆಯ ಮನೋಭಾವವಿರುವವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಿಲ್ಲ ಎಂದು ಜನಧ್ವನಿ ವೇದಿಕೆಯ ಸದಸ್ಯರು ದೂರಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜನಧ್ವನಿ ವೇದಿಕೆಯ ಬಾಶೆಟ್ಟಿಹಳ್ಳಿ ಕೃಷ್ಣ ಮೂರ್ತಿ, ನಾರಾಯಣಸ್ವಾಮಿ, ಜ.19 ರಂದು ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಸಹಕಾರ ಸಂಘದ ಚುನಾವಣೆ ನಡೆಯಿತು. ಇಲ್ಲಿ ಚುನಾವಣೆಯು ನಡೆದು 30 ವರ್ಷಗಳು ಆಗಿದೆ. ಈಗಲೂ ಮೂರು ಪಕ್ಷಗಳು ಸೇರಿ ಅಪವಿತ್ರ ಮೈತ್ರಿಯೊಂದಿಗೆ, ರೈತರಿಗೆ ಯಾವುದೇ ಮಾಹಿತಿ ನೀಡದೇ ಅವಿರೋಧ ಆಯ್ಕೆ ಎಂದು ಅವರಿಗೆ ಬೇಕಾದವರನ್ನೇ ಆಯ್ಕೆ ಮಾಡಲು ಹೋರಟಾಗ ಜನಧ್ವನಿ ವೇದಿಕೆಯ ಮುಖಂಡರು ಖಂಡಿಸಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿತು. ಇದರ ಪರಿಣಾಮ ಚುನಾವಣೆ ನಡೆದು ಎನ್‍ಡಿಎ ಬೆಂಬಲಿತ ಅಭ್ಯರ್ಥಿಗಳು 9 ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 2 ಸದಸ್ಯರು ಜಯಗಳಿಸಿದ್ದಾರೆ. ಸಂಘದಲ್ಲಿ ಒಟ್ಟು ಮತದಾರರ ಸಂಖ್ಯೆ 242,ಅಷ್ಟೇ. ಸಂಘಕ್ಕೆ ಆಯ್ಕೆಯಾಗಲು ಹತ್ತಾರು ಲಕ್ಷಗಳು ಖರ್ಚು ಮಾಡಿ ಗೆಲ್ಲುವ ಅವಶ್ಯಕತೆ ಇತ್ತಾ. ಜನಧ್ವನಿ ವೇದಿಕೆಯಿಂದ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತ ನೀಡಿದ ಎಲ್ಲಾ ಮತಬಾಂಧವರಿಗೂ ತಮ್ಮ ಮೂಲಕ ವಂದನೆಗಳು ಅರ್ಪಿಸುತ್ತೇವೆ ಎಂದರು.
ಈ ಸಮಯದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಪ್ರೇಮ್ ಕುಮಾರ್, ಚುನಾವಣೆ ನಡೆಸಲು ಕಾರಣರಾದವರು ಕಿಡಿಕೇಡಿಗಳು ಎಂದು ಕರೆದಿದ್ದಾರೆ. ಇದು ಖಂಡನೀಯ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವವನ್ನು ಉಳಿಸುವ, ಗೌರವಿಸುವ ಹಾಗೂ ಘನತೆಯನ್ನು ಹೆಚ್ಚಿಸುತ್ತದೆ. ಆದರೆ, ಚುನಾವಣೆಗೆ ಸ್ಪರ್ಧಿಸುವುದು ಮತ್ತು ಮತದಾನ ಮಾಡುವುದನ್ನು ವಿರೋಧಿಸುವ ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದ ಇವರು ಮತ್ತೊಬ್ಬರನ್ನು ಕಿಡಿಗೇಡಿಗಳು ಎನ್ನಲು ಯಾವ ನೈತಿಕತೆ ಇದೆ. ಹಲವಾರು ವರುಷಗಳಿಂದ ಏಳು ಊರಿನ ರೈತರುಗಳಿಗೆ ಮಾಹಿತಿ ನೀಡದೆ ಕತ್ತಲಲ್ಲಿ ಇಟ್ಟು ಸಂಘದ ಸದಸ್ಯತ್ವವನ್ನು ಹೆಚ್ಚು ಮಾಡದೆ ಕೇಲವೇ ಮತದಾರರನ್ನು ಉಳಿಸಿಕೊಂಡು ಅವಿರೋಧವಾಗಿ ಆಯ್ಕೆಯಾಗಲು ಸಂಚು ರೂಪಿಸುತ್ತಿದ್ದರು. ಇದನ್ನು ಗಮನಿಸಿದ ಜನಧ್ವನಿ ವೇದಿಕೆಯು ಇನ್ನು ಇರುವ ನೂರಾರು ರೈತರನ್ನು ಸಹಕಾರ ಸಂಘಕ್ಕೆ ಸದಸ್ಯರನ್ನಾಗಿಸಲು ಈ ಚುನಾವಣೆಯ ನಿರ್ಣಯವನ್ನು ತೆಗೆದುಕೊಂಡ ಕಾರಣ ವೇದಿಕೆಯನ್ನು ಕಿಡಿಗೇಡಿಗಳೆಂದು ಸಂಭೋಧಿಸಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ 30 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗಿ ತಮ್ಮ ನಿರ್ದೇಶಕರು ಸಂಘವನ್ನು ಅಭಿವೃದ್ಧಿ ಮಾಡಲು ರೈತರಿಗೆ ಸವಲತ್ತುಗಳನ್ನು ನೀಡಲು ಏನು ಪ್ರಯತ್ನಪಟ್ಟಿದ್ದಾರೆ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ ಎಂದರು.
ಈ ವೇಳೆ ರಾಜ್ಯ ಮತ್ತು ತಾಲೂಕು ವೇದಿಕೆ ಮುಖಂಡರಾದ ರಮೇಶ ಸಂಕ್ರಾಂತಿ, ಮತ್ತು ಕೊನಘಟ್ಟ ಚಂದ್ರಪ್ಪ, ಕೆಸ್ತೂರು ಗಿರೀಶ್, ತಿಪ್ಪೂರು ನರಸಿಂಹ ಮೂರ್ತಿ, ಮತ್ತು ರಾಮಮೂರ್ತಿ. ನಾಗದೇನಹಳ್ಳಿ ಚಂದ್ರಣ್ಣ ಏಕಾಶಿಪುರ ರಾಜಣ್ಣ , ಬಾಶೆಟ್ಟಹಳ್ಳಿ ಕೃಷ್ಣ ಮೂರ್ತಿ, ಸದಾನಂದ, ಅರಹಳ್ಳಿ ಗುಡದಹಳ್ಳಿ ವೆಂಕಟೇಶ, ಓಬದೇನಹಳ್ಳಿ ರಾಜೇಂದ್ರ ಎಳ್ಳುಪುರ ಮಹೇಶ, ಬೈರಸಂದ್ರ ಗಂಗಾದರ್, ಜಿಂಕೆಬಚ್ಚಹಳ್ಳಿ ದುರ್ಗೇಶ್ ಹಾಜರಿದ್ದರು.
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು…
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…