ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಮತದಾನ ಡಿ.21ರಂದು ನಡೆದಿತ್ತು. ಇಂದು (ಡಿ.24)ರಂದು ಮತ ಎಣಿಕೆ ನಡೆದಿದ್ದು, ಬಿಜೆಪಿ 14, ಕಾಂಗ್ರೆಸ್ 3, ಜೆಡಿಎಸ್ 1, ಪಕ್ಷೇತರ 1 ಸ್ಥಾನಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ..
ಇನ್ನೂ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಕಾರಣಾಂತರಗಳಿಂದ ಅದು ಆಗಿಲ್ಲ. ಅರೆಹಳ್ಳಿ ಗುಡ್ಡದಹಳ್ಳಿ ಕ್ಷೇತ್ರದ ಗುಂಡಣ್ಣ ಹೃದಾಯಾಘಾತದಿಂದ ಮರಣಹೊಂದಿದ ಕಾರಣ ಅಲ್ಲಿ ಸೋತಿದ್ದೇವೆ. ಪ್ರಾಮಾಣಿಕ ಬಿಜೆಪಿ ಸ್ಪರ್ಧಿಗಳ ಗೆಲುವಿಗೆ ನಾವು, ಸಂಘಟನೆ, ಮುಖಂಡರು, ಕಾರ್ಯಕರ್ತರು ಅವಿರತ ಶ್ರಮಿಸಲಾಗಿದೆ….ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
10ದಿನ ಅಧಿವೇಶನದಲ್ಲಿ ಒಂದು ದಿನ ಮಾತ್ರ ಹೋಗಿ ಇನ್ನು 9 ದಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಗೆಲುವಿಗೆ ಶ್ರಮಿಸಿದ್ದೇವೆ. ನನ್ನ ಎರಡೂವರೆ ವರ್ಷಗಳ ಕೆಲಸದಲ್ಲಿ ಬಾಶೆಟ್ಟಿಹಳ್ಳಿಗೆ ಆರನೇ ಹಂತದಲ್ಲಿ ಕಾವೇರಿ ನೀರನ್ನು ಹರಿಸಲು ಶ್ರಮಿಸಿದ್ದೇನೆ. 41 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಜಲಜೀವನ್ ಮಿಷನ್ ಯೋಜನೆ ತಂದಿದ್ದೇನೆ. ಉಚಿತವಾಗಿ ಐದೂವರೆ ಎಕರೆ ಜಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿಸಲಾಗಿದೆ. 20 ಕಸ ವಾಹನಗಳನ್ನು ಕೊಟ್ಟಿದ್ದೇನೆ. ಮೂರವರೆ ಕೋಟಿ ಇದ್ದಂತಹ ಆದಾಯವನ್ನು 18ಕೋಟಿಗೆ ಏರಿಸಲಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಖಾತೆಗಳನ್ನು ಮಾಡಿಸಿದ್ದೇವೆ. ಹೀಗೆ ಪ್ರಾಮಾಣಿಕತೆ, ಪಕ್ಷ ನಿಷ್ಠೆಯಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿದರು….
ಅಭ್ಯರ್ಥಿಗಳ ಶ್ರಮ, ಪರಿಶ್ರಮ, ಬದ್ಧತೆ, ಪಕ್ಷ ನಿಷ್ಠೆಗೆ ಜನ ಬೆಂಬಲ ಸೂಚಿಸಿದ್ದಾರೆ…ಎಳ್ಳುಪುರ ಏನು ಜಿದ್ದಜಿದ್ದಿಯಾಗಿ ಇರಲಿಲ್ಲ. ಬಿಜೆಪಿ ಗೆದ್ದೇ ಗೆಲ್ಲುವ ನಿರೀಕ್ಷೆ ಇತ್ತು. ಎಳ್ಳುಪುರ ನನಗೂ ಲೀಡ್ ಕೊಟ್ಟಂತಹ ವಾರ್ಡ್, ಪಾರ್ಟಿ ನಿಷ್ಠರು ಬಿಜೆಪಿ ಗೆಲುವಿಗೆ ಕೆಲಸ ಮಾಡಿದ್ದಾರೆ… ಒಬ್ಬ ಪ್ರಾಮಾಣಿಕ ಕಾರ್ಯಕರ್ತನನ್ನು ಗೆಲ್ಲಿಸಿಕೊಂಡಿದ್ದೇವೆ. ಇಲ್ಲಿನ ಅಭ್ಯರ್ಥಿ ಮಧು ಅವರಿಗೆ ಪ್ರತಿ ಮತದಾರನ ಸಂಪರ್ಕವಿತ್ತು. ಒಳ್ಳತನಕ್ಕೆ ಬೆಲೆ ಇದೆ. ಕೆಲಸಕ್ಕೆ ಬೆಲೆ ಇದೆ. ದರ್ಪ ದುರಹಂಕಾರವನ್ನು ಜನ ತಿರಸ್ಕಾರ ಮಾಡಿದ್ದಾರೆ. ಬಂಡಾಯ ಇದ್ದ ಎಲ್ಲಾ ಕಡೆ ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾನು ಪ್ರತಿ ಮತದಾರನ ಮನೆಗೆ ಹೋಗಿ ಮತಯಾಚನೆ ಮಾಡಿದ್ದೇನೆ. ಮತ ಕೇಳೋದು ನನ್ನ ಕರ್ತವ್ಯ. ನಮ್ಮ ಶ್ರಮಕ್ಕೆ, ನಮ್ಮ ನಿಷ್ಠೆಗೆ ಮತದಾರ ಕೈಹಿಡಿದ್ದಾನೆ. ಇಲ್ಲಿ ಕಾಂಗ್ರೆಸ್ ಇಲ್ಲ ಗ್ಯಾರಂಟಿನೂ ಇಲ್ಲ. ಗ್ಯಾರಂಟಿಗೆ ವಾರೆಂಟಿ ಮುಗಿದಿದೆ. ಗ್ಯಾರಂಟಿನ ಜನ ಮನೆಕಡೆ ಕಳುಹಿಸುತ್ತಾರೆ. ಬಿಜೆಪಿ ಭದ್ರಕೋಟೆ ಬರೀ ಮಂಗಳೂರು, ಉತ್ತರ ಕನ್ನಡ ಅಲ್ಲ, ಬೆಂಗಳೂರು ಸುತ್ತಮುತ್ತಲೂ ಇದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಬಿಜೆಪಿ ಭದ್ರಕೋಟೆಯಾಗಿರುತ್ತದೆ ಎಂದರು.
ವರದನಹಳ್ಳಿಯಲ್ಲಿ ಮೈತ್ರಿ ಮಾಡಿಕೊಂಡಿದ್ವಿ, ಅಲ್ಲಿ ಮಹಿಳಾ ಸ್ಥಾನವನ್ನು ನಮಗೆ ಕೊಡಿ ಅಂದ್ರು, ಅಲ್ಲಿನ ಕಾರ್ಯಕರ್ತರು ನಮಗೆ ಸಹಕಾರ ಕೊಟ್ಟರು. ಚಂದನ ಅಕ್ಷಯ್ ಕುಮಾರ್ ಪರವಾಗೂ ಮತ ಕೇಳಿದ್ದೇನೆ. ಅಲ್ಲೂ ಅವರು ಗೆದ್ದಿದ್ದಾರೆ. ನಗರಸಭೆಯ ಹೇಮಾವತಿ ಪೇಟೆ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆದ್ದಿದೆ. ಅದು ಬಿಜೆಪಿ ಭದ್ರಕೋಟೆ, ನನ್ನ ಚುನಾವಣೆಯಲ್ಲೂ ಅತಿ ಹೆಚ್ಚು ಲೀಡ್ ಕೊಟ್ಟಿತು ಎಂದರು..
ಪ್ರೇಮ್ ಕುಮಾರ್ ಅವರನ್ನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾರದರೂ ಒಬ್ಬ ವ್ಯಕ್ತಿ ಶ್ರಮಪಟ್ಟು ಎಲ್ಲರನ್ನು ಉದ್ಧರ ಮಾಡಲು ಪ್ರಯತ್ನಿಸಬೇಕು. ಅದನ್ನ ಬಿಟ್ಟು ಮನೆ ಹಾಳು ಮಾಡುತ್ತೇನೆ, ಸೋಲಿಸುತ್ತೇನೆ ಎಂದು ಹೇಳಿ ಹೋದವರೆಲ್ಲಾ ಮನೆಕಡೆ ನಡೆದಿದ್ದಾರೆ…
ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…
ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…
ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…