ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಸಹಯೋಗದೊಂದಿಗೆ ಬಾಶೆಟ್ಟಿಹಳ್ಳಿ ಕೆರೆ ಅಂಗಳದಲ್ಲಿ ಪ್ಲಾಸ್ಟಿಕ್ ಕವರ್, ಗಿಡಗಂಟಿಗಳ ತೆರವು, ವಿವಿಧ ಸಸಿಗಳನ್ನು ನೆಟ್ಟು ನೀರೆರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪಿ.ನರಸಿಂಹಮೂರ್ತಿ, ಕೆರೆಯ ಸ್ವಚ್ಛತೆ, ಅಭಿವೃದ್ಧಿಗೆ ಪಟ್ಟಣ ಪಂಚಾಯುತಿ ವತಿಯಿಂದ ಸಹಕಾರ ಇದ್ದೇ ಇರುತ್ತದೆ. ಕೆರೆ ಕಟ್ಟೆ ಮೇಲೆ ವಾಕಿಂಗ್ ಪಾಥ್, ಪಾರ್ಕ್ ಮಾಡಲು ಶಾಸಕರು ಬಳಿ ಮನವಿ ಮಾಡಲು ನಿರ್ಧರಿಸಿದ್ದೇವೆ, ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ನಂತರ ಮಾತನಾಡಿದ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಸದಸ್ಯ ಲೋಹಿತ್, ವಿಶ್ವ ಪರಿಸರ ದಿನ ಹಾಗೂ ಸಾಗರ ದಿನದ ಅಂಗವಾಗಿ ಕೆರೆಗಳ ಸ್ವಚ್ಛತೆಗೆ ಮುಂದಾಗಿದ್ದು, ಸುಮಾರು 19 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಬಾಶೆಟ್ಟಿಹಳ್ಳಿ ಕೆರೆಯ ನೀರಿನಲ್ಲಿ ಕರಗುವ ಲವಣಾಂಶ, ಆಮ್ಲಜನಕ, ಗಡುಸುತನ, ನೈಟ್ರೇಟ್, ಕ್ಯಾಲ್ಸಿಯಂ, ಸೇರಿದಂತೆ ವಿವಿಧ ರೀತಿಯ ಪರೀಕ್ಷೆ ಮಾಡಿ ಸ್ಥಳದಲ್ಲೇ ವರದಿ ಪಡೆಯಲಾಯಿತು. ಸದ್ಯ ಕೆರೆ ನೀರಿನ ಗುಣಮಟ್ಟ ಸಮತೋಲನದಲ್ಲಿದೆ ಎಂದು ಪರೀಕ್ಷಾ ವರದಿಯಿಂದ ತಿಳಿದು ಬಂದಿದೆ ಎಂದರು.
ಕೆರೆಯಲ್ಲಿ ಒಟ್ಟು 180 ಕೆಜಿ ಪ್ಲಾಸ್ಟಿಕ್ ನ್ನು ಹೊರತೆಗೆಯಲಾಯಿತು. ನಂತರ ಕೆರೆ ಕಟ್ಟೆ ಬಿರುಕು ಬಿಟ್ಟಿರುವ ಕಡೆ ಮಣ್ಣು, ಕಲ್ಲು ಹಾಕಿ ಭದ್ರಪಡಿಸಲಾಯಿತು ಎಂದು ತಿಳಿಸಿದರು.
ಈ ವೇಳೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ, ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ರಾಹುಲ್, ಡಾ.ಶಾಂತನೂ ಗುಪ್ತ, ಪ್ರಗ್ಯಾ, ಸುರಭಿ, ಶೇಷಾದ್ರಿ, ನವೋದಯ ಚಾರಿಟಬಲ್ ಟ್ರಸ್ಟಿನ ಜನಾರ್ಧನ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ವೆಂಕಟರಾಜು, ಪಟ್ಟಣ ಪಂಚಾಯತಿ ಅಧಿಕಾರಿಗಳಾದ ರಮೇಶ್ ಬಾಬು, ಕೀರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.