ಸ್ನೇಹಿತರ ಜೊತೆ ಬಾವಿಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಾಸಲು ಹೋಬಳಿಯ ಬನಾವತಿ ಗ್ರಾಮದಲ್ಲಿ ನಡೆದಿದೆ.
ಮಧ್ಯಾಹ್ನದ ಬೇಸಿಗೆ ಬೇಗೆ ತಣಿಸಿಕೊಳ್ಳಲು ಬಾವಿಗೆ ಈಜಲು ಹೋದ ಯುವಕ, ನೀರಲ್ಲಿ ಮುಳುಗಿ ಅಸುನೀಗಿದ್ದಾನೆ. ಆರೂಡಿ ಗ್ರಾಮದ ನರಸಿಂಹರಾಜ್(22), ಮೃತ ಯುವಕ.
ಸಂಜೆ ಯುವಕ ನೀರಿನಲ್ಲಿ ಮುಳುಗಿ ಸಾವನಪ್ಪಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಮೃತ ದೇಹ ಹೊರತೆಗೆದಿದ್ದಾರೆ.
ಒಂದು ವರ್ಷದ ಹಿಂದೆ ಅಪಘಾತದಲ್ಲಿ ನರಸಿಂಹರಾಜ್ ಸಹೋದರ ಕಾರ್ತಿಕ್ ಸಾವನ್ನಪ್ಪಿದ್ದರು, ಇಬ್ಬರು ಪುತ್ರರನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ ತಂದೆ ನರಸಿಂಹಮೂರ್ತಿ, ತಾಯಿ ಮಂಜಮ್ಮ.
ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.