ಬಾಡ೯ರ್ – ಗವಾಸ್ಕರ್ ಟ್ರೋಫಿ : ಸ್ಪಿನ್ನರ್ ಗಳ ಬಲೆಗೆ ಬಿದ್ದ ಆಸೀಸ್, ಭಾರತಕ್ಕೆ ಇನ್ನಿಂಗ್ಸ್ ಹಾಗೂ132 ರನ್ ಜಯ!

ನಾಗ್ಪುರ : ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಅತ್ಯಂತ ರೋಚಕತೆಯಿಂದ ಕೂಡಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ಹಾಗೂ ಹಾಲಿ ಆಟಗಾರರ ಮಾತುಗಳ ನಡುವೆಯೇ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 132 ರನ್ ಜಯಗಳಿಸುವ ಮೂಲಕ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಭಿಸಿದ ಪ್ರವಾಸಿ ತಂಡ ಮೊದಲ ಇನಿಂಗ್ಸ್ ನಲ್ಲಿ ಬೇಗನೇ ವಿಕೆಟ್ ಕಳೆದುಕೊಂಡರು, ಆಸೀಸ್ ತಂಡದ ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಾದ ಲಭುಶನಗೆ (49), ಮಾಜಿ ನಾಯಕ ಸ್ಟೀವನ್ ಸ್ಮಿತ್ (37), ಹ್ಯಾಂಗ್ ಕೂಮ್ (31) ಆಲಕ್ಸ್ ಹ್ಯಾರಿ (36) ರನ್ ಗಳಿಸಿ ತಂಡದ ಮೊತ್ತ 177 ರನ್ ತಲುಪಲು ನೆರವಾದರು.

ಭಾರತದ ತಂಡದ ಬೌಲಿಂಗ್ ಪಡೆಯಲ್ಲಿ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಮೊದಲಿಗೆ ವಿಕೆಟ್ ಕಬಳಿಸಿದರೆ ನಂತರ ಬಂದ ಸ್ಪಿನ್ ಜೋಡಿ ಆಲ್ ರೌಂಡರ್ ರವೀಂದ್ರ ಜಡೇಜಾ 5 ವಿಕೆಟ್ ಗೊಂಚಲು ಪಡೆದರೆ, ಆರ್. ಅಶ್ವಿನ್ 3 ವಿಕೆಟ್ ಪಡೆಯುವ ಮೂಲಕ ಭಾರತದ ಪರವಾಗಿ 450 ವಿಕೆಟ್ ಪಡೆದ ಸಾಧನೆ ಮಾಡಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮೊದಲ ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು, ಪದಾರ್ಪಣೆ ಪಂದ್ಯವಾಡಿದ ಆಸೀಸ್ ಸ್ಪಿನ್ನರ್ ಮಪಿ೯ ಕೆ. ಎಲ್. ರಾಹುಲ್ ವಿಕೆಟ್ ಕಬಳಿಸುವ ಮೂಲಕ ಬ್ರೇಕ್ ಥ್ರೋ ನೀಡಿದರು.

ಇನ್ನಿಂಗ್ಸ್ ಗೆ ವೇಗ ನೀಡಿದ ನಾಯಕ ರೋಹಿತ್ ಶರ್ಮಾ ಶತಕ (120) ರನ್ ಸಿಡಿಸಿ ತಂಡಕ್ಕೆ ನೆರವಾದರು, ಆರ್. ಅಶ್ವಿನ್ (23), ಆಲ್ ರೌಂಡರ್ ರವೀಂದ್ರ ಜಡೇಜಾ (70), ಅಕ್ಷರ್ ಪಟೇಲ್ (84), ಮೊಹಮ್ಮದ್ ಶಮಿ (37) ರನ್ ಸಿಡಿಸಿದ್ದರ ಫಲವಾಗಿ ತಂಡ 400 ರನ್ ಗಳಿಸಿತು. ಮೊದಲ ಪಂದ್ಯದಲ್ಲಿಯೇ 7 ವಿಕೆಟ್ ಪಡೆದ ಮಪಿ೯ ಗಮನ ಸೆಳೆದರು.

ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಪಡೆಯನ್ನು ಪೆವಿಲಿಯನ್ ಗೆ ಪೆರೆಡ್ ನಡೆಸಿದ ಕೀರ್ತಿ ಸ್ಪಿನ್ನರ್ ಗಳಿಗೆ ಸಲ್ಲಬೇಕು, ಮಾಜಿ ನಾಯಕ ಸ್ಟೀವನ್ ಸ್ಮಿತ್ (25) ರನ್ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಪ್ರತಿರೋಧ ತೋರಲಿಲ್ಲ, ಆರ್. ಅಶ್ವಿನ್ 5 ವಿಕೆಟ್ ಗೊಂಚಲು ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ 3 ವಿಕೆಟ್ ಕಬಳಿಸಿದರು.

ಸ್ಪಿನ್ ಬಲೆಯಲ್ಲಿ ಸಿಕ್ಕಿ ಆಸ್ಟ್ರೇಲಿಯಾ ತಂಡ 91 ರನ್ ಗೆ ಆಲೌಟ್ ಆಯಿತು. ಎರಡೂ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಲ್ ರೌಂಡರ್ ರವೀಂದ್ರ ಜಡೇಜಾ 8 ವಿಕೆಟ್ ಹಾಗೂ 70 ರನ್ ಗಳಿಸಿದ್ದರಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *