ಖಾಸಗಿ ಬಸ್ ನ ಬ್ರೇಕ್ ಫೇಲ್ಯೂರ್ ಆಗಿ ಅಪಘಾತಕ್ಕೀಡಾದ ಘಟನೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ(ಟಿ.ಬಿ ವೃತ್ತ) ಇಂದು ಸಂಜೆ ನಡೆದಿದೆ.
ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವೆಂಕಟೇಶ್ವರ ಟ್ರಾವೆಲ್ಸ್ ಬಸ್ ನ ಬ್ರೇಕ್ ಫೇಲ್ಯೂರ್ ಆಗಿ ಪ್ರವಾಸಿ ಮಂದಿರದ ಬಳಿ ಫುಟ್‌ಪಾತ್ ಮೇಲೆ ಹರಿದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ಬ್ರೇಕ್ ಫೆಲ್ಯೂರ್ ಆದ ಕಾರಣ ಗೌರಿಬಿದನೂರಿನಿಂದ ನಿಧಾನವಾಗಿಯೇ ಬಂದಿದೆ. ಟಿ.ಬಿ.ವೃತ್ತದ ಸಿಗ್ನಲ್ ಹಾಕಿದಾಗ ನಿಯಂತ್ರಣಕ್ಕೆ ಸಿಗದೇ ಫುಟ್ ಪಾತ್ ಚರಂಡಿ ಮೇಲೆ ಚಕ್ರ ಹತ್ತಿಸಿರೋ ಚಾಲಕ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.