ಜ.9ರಂದು ಬೆಳಗ್ಗೆ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ, ಗೌಡನಕಟ್ಟೆ ಗ್ರಾಮದ ರಾಜೇಶ್ವರಿ ಎಂಬಾಕೆ ಸಂಬಂಧಿಕರ ಮಗಳ ನಾಮಕರಣಕ್ಕೆ ಹೊಸದುರ್ಗದ ಮಾಳಪ್ಪನಹಳ್ಳಿಗೆ ಹೋಗಲು ತಿಪಟೂರಿನಿಂದ ಹುಳಿಯಾರಿಗೆ ಬಂದು ಹುಳಿಯಾರಿನಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಾಳಪ್ಪನಹಳ್ಳಿಗೆ ಹೋಗಲು ಹುಳಿಯಾರು ಬಸ್ ಸ್ಟಾಪ್ ನಲ್ಲಿ ಬೆಳಗ್ಗೆ 10.45 ರ ಸಮಯದಲ್ಲಿ ಬಸ್ ಗೆ ಹತ್ತುವ ಸಮಯದಲ್ಲಿ ತಾನು ಬಗಲಿನಲ್ಲಿ ನೇತು ಹಾಕಿಕೊಂಡಿದ್ದ ಬ್ಯಾಗ್ ನಲ್ಲಿದ್ದ ಪರ್ಸನ್ನು ಅದರಲ್ಲಿದ್ದ ಚಿನ್ನದ ಒಡವೆಗಳ ಸಮೇತ ಯಾರೋ ಕಳ್ಳರು ಪಿಕ್ ಪಾಕೆಟ್ ಮಾಡಿ ಕದ್ದಿರುತ್ತಾರೆ, ಈ ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕೇಸಿನ ಆರೋಪಿತರನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ, ತಿಪಟೂರು ಉಪವಿಭಾಗದ ಡಿ.ಎಸ್.ಪಿ. ವಿನಾಯಕ ಎನ್ ಶೆಟಗೇರಿ ರವರ ಮಾರ್ಗ ಸೂಚನೆ ಮೇರೆಗೆ ತಂಡ ರಚಿಸಿದ್ದು, ಫೆ.27ರಂದು ಅಲುವೇಲಮ್ಮ ಹಾಗೂ ಇತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ 01 ಪ್ರಕರಣ ಹಾಗೂ ಕಿಬ್ಬನಹಳ್ಳಿ ಕ್ರಾಸ್ ಠಾಣಾ ವ್ಯಾಪ್ತಿಯ 01 ಪ್ರಕರಣಗಳಲ್ಲಿ ವರದಿಯಾಗಿದ್ದ ಕಳ್ಳತನಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತದೆ.
ಆರೋಪಿತರಿಂದ ಒಟ್ಟು 10,05 ಲಕ್ಷ ಬೆಲೆ ಬಾಳುವ 134 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗಿದೆ.