ಇಂದು ನಾಡಿನಾದ್ಯಂತ ಬಸವಜಯಂತಿ ಅದ್ಧೂರಿಯಾಗಿ ಆಚರಣೆ, ಈ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಗಲಕೋಟೆಯ ಕೂಡಲಸಂಗಮದ ಸಂಗಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಐಕ್ಯಲಿಂಗದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜಗಜ್ಯೋತಿ ಬಸವಣ್ಣನವರ ಬೋಧನೆಗಳು ಸರ್ವರ ಶ್ರೇಯೋಭಿವೃದ್ಧಿಗಾಗಿ ಬದುಕಲು ಸದಾ ಪ್ರೇರಣೆ ನೀಡುತ್ತವೆ ಎಂದು ತಿಳಿಸಿ ತಮ್ಮ ಕರ್ನಾಟಕ ಪ್ರವಾಸವನ್ನು ಪ್ರಾರಂಭಿಸಿದರು.
ಈ ವೇಳೆ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.