ಬರಿಗೈಯಲ್ಲಿ ಬಂದವನಿಗೆ ಸಿಕ್ತು ಬರೋಬ್ಬರಿ 94ಲಕ್ಷ: ಆ ಹಣ ಏನು ಮಾಡಬೇಕು ಎಂದು 6ದಿನ ಗೊಂದಲದಲ್ಲಿದ್ದ ಯುವಕ; ಕೊನೆಗೆ ಆಗಿದ್ದೇನು? ಇಲ್ಲಿದೆ ಮಾಹಿತಿ

ಬರಿಗೈಯಲ್ಲಿ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ಹಣ ಸಿಕ್ಕಿದ್ದೆ ತಡ ಕೇವಲ ಹತ್ತೇ ಹತ್ತು ಸೆಕೆಂಡ್​ನಲ್ಲಿ ಯಾವ ಪರಿಶ್ರಮವೂ ಇಲ್ಲದೆ ಲಕ್ಷಾಧಿಪತಿಯಾಗಿಬಿಟ್ಟಿದ್ದ. ಅಷ್ಟೋಂದು ಹಣ ನೋಡಿದ ಬಳಿಕ ಏನು ಮಾಡಬೇಕು ಅನ್ನೋ ಗೊಂದಲದಲ್ಲೇ ಆ ಯುವಕ 6 ದಿನ ಕಳೆದಿದ್ದ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಸದ್ಯ ಪೊಲೀಸರ ಅತಿಥಿಯಾಗಬೇಕಾದ ಪರಿಸ್ಥಿತಿ ಒದಗಿಬಂದಿದೆ.

94ಲಕ್ಷ ಹಣ ಸಿಕ್ಕಿದ್ದು ಹೇಗೆ?

ಬೆಂಗಳೂರು ನಗರದ ಚಂದ್ರ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬಾತ ಸೈಟ್ ಖರೀದಿಸಲು 94 ಲಕ್ಷ ರೂ. ಹಣ ಶೇಖರಿಸಿಟ್ಟಿದ್ದ. ಅದನ್ನ ತನ್ನ ಸ್ನೇಹಿತನ ಅಂಗಡಿಯಲ್ಲಿ ಲೆಕ್ಕಾ ಮಾಡಿ ನಂತರ ವಕೀಲರ ಕಚೇರಿಗೆ ಹೋಗಿ ಸೈಟ್ ಖರೀದಿಸಲು ಬೇಕಾದ ಏರ್ಪಾಟು ಮಾಡಿಕೊಳ್ಳೋಣ ಎಂದು ಬ್ಯಾಗ್​ನಲ್ಲಿ ಡಾಕ್ಯುಮೆಂಟ್ಸ್ ಇಟ್ಟು, ಬಾಕ್ಸ್​ನಲ್ಲಿ ಎಲ್ಲಾ ಹಣವನ್ನು ತುಂಬಿಸಿ ಹಣದ ಬಾಕ್ಸ್ ಅನ್ನು ತಂದು ಕಾರಿನಲ್ಲಿ ಇಡಲು ಮುಂದಾಗಿದ್ದ. ಇನ್ನೇನು ಮನೆ ಕೆಳಗೆ ಬರ್ತಿದ್ದಂತೆ ಕಾರಿನ ಡೋರ್ ಓಪನ್ ಮಾಡಬೇಕಿತ್ತು. ಹಾಗಾಗಿ ಕೈನಲ್ಲಿದ್ದ ಹಣವನ್ನು ಅಪರಿಚಿತ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದಾರೆ. ಬಳಿಕ ಕಾರ್ ಡೋರ್ ಓಪನ್ ಮಾಡಿ ಸೈಟ್ ಖರೀದಿಗೆ ಬೇಕಿದ್ದ ದಾಖಲಾತಿ ಇದ್ದ ಬ್ಯಾಗನ್ನು ಕಾರಿನಲ್ಲಿ ಹಾಕಿಕೊಂಡು ಪ್ರಮೋದ್ ತಮ್ಮ ಸ್ನೇಹಿತನ ಅಂಗಡಿಗೆ ಹೊರಟಿದ್ದಾರೆ.

ಪ್ರಮೋದ್ ಕಾರು ಹೊರಡುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಂದ ವರುಣ್ ಎಂಬ ಯುವಕ ಪಾರ್ಕ್ ಮಾಡಿದ್ದ ತನ್ನ ಬೈಕ್​ ಹತ್ತಿರ ಬರುತ್ತಾನೆ. ಈ ವೇಳೆ ಬೈಕ್ ಮೇಲೆ ಒಂದು ಬಾಕ್ಸ್ ಸಿಕಿದ್ದು ಅದನ್ನು ತೆರೆದು ನೋಡಿದಾಗ ಕಂತೆ ಕಂತೆ ಹಣ ಸಿಕ್ಕಿದೆ. ಹಣ ಸಿಕ್ಕಿದ್ದೇ ತಡ ವರುಣ್ ಹಣದ ಸಮೇತ ಆ ಸ್ಥಳದಿಂದ ಎಸ್ಕೇಪ್ ಆಗುತ್ತಾನೆ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್​ನಲ್ಲಿ ಕೆಲಸ ಮಾಡುವ ವರುಣ್ ತನ್ನ ಶ್ರೀನಗರ ಮನೆಯಲ್ಲಿ ಹಣವನ್ನ ಬಚ್ಚಿಟ್ಟಿರುತ್ತಾನೆ. 94 ಲಕ್ಷ ರೂ. ಹಣ ಏನು ಮಾಡಬೇಕು ಎನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದಾನೆ. ಜೊತೆಗೆ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಸಲು ಪ್ಲಾನ್ ಮಾಡ್ಕೊಂಡಿದ್ದಾನೆ. ಆದರೆ ಎಲ್ಲಿಯೂ ಹಣ ಖರ್ಚು ಮಾಡದೇ ಮನೆಯಲ್ಲಿ ಬಚ್ಚಿಟ್ಟಿರುತ್ತಾನೆ.

ಬೈಕ್ ಹೊರಟ ಜಾಡು ಹಿಡಿಯಲು 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ

ಇನ್ನು ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್​ಗೆ ಶಾಕ್ ಆಗಿದೆ. ತಕ್ಷಣ ಪ್ರಮೋದ್ ವಾಪಸ್ಸು ಬಂದು ನೋಡಿದಾಗ ಬೈಕ್ ಹಾಗೂ ಹಣ ಎರಡೂ ಇರಲಿಲ್ಲ. ಕೂಡಲೇ ಪ್ರಮೋದ್ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬೈಕ್ ಹೊರಟ ಜಾಡು ಕಂಡುಹಿಡಿಯಲು ಒಟ್ಟು 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.

ಸದ್ಯ ಹಣ ಎಸ್ಕೇಪ್ ಮಾಡಿದ್ದ ವರುಣ್ ನನ್ನು ವಶಕ್ಕೆ ಪಡೆದು 94 ಲಕ್ಷ ಹಣವನ್ನು ವಾಪಸ್ ಪಡೆಯಲಾಗಿದೆ.

ಹಣ ಸಿಕ್ತು ಅಂತಾ ಮನೆಗೆ ತೆಗೆದುಕೊಂಡು ಹೋಗಿ ಆರೋಪಿಯಾದ, ಮನೆಗೆ ಅಲ್ಲದೇ ನೇರವಾಗಿ ಆ ಹಣವನ್ನ ಪೊಲೀಸರಿಗೆ ಒಪ್ಪಿಸಿದ್ದರೆ ಹೀರೋ ಆಗುತ್ತಿದ್ದ. ಆದ್ದರಿಂದ ಪರರ ವಸ್ತು ಯಾವತ್ತಿದ್ದರೂ ಅದು ಪಾಶಾಣಕ್ಕೆ ಸಮ, ತಮ್ಮಲ್ಲದ ವಸ್ತುಗಳಿಗೆ ಯಾವ ಕಾರಣಕ್ಕೂ ಆಸೆ ಪಡಬಾರದು.

Ramesh Babu

Journalist

Recent Posts

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

11 hours ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

12 hours ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

14 hours ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

15 hours ago

ಬರ ಪರಿಹಾರಕ್ಕೆ 60 ಸಾವಿರ ಕೋಟಿ ನಷ್ಟದ ಅಂದಾಜು- ಡಿಸಿಎಂ ಡಾ.ಜಿ ಪರಮೇಶ್ವರ್

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…

17 hours ago

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

22 hours ago