ಬರಗಾಲದ ಸಂದರ್ಭದಲ್ಲಿ ಜಾನುವಾರುಗಳ ನಿರ್ವಹಣೆ ಮಾರ್ಗಸೂಚಿ

ಬರಗಾಲವು ಸಾಮಾನ್ಯವಾಗಿ ಉತ್ಪಾದನೆಯ ಚಕ್ರದಲ್ಲಿ ಒಣಹವೆಯ ವಾತಾವರಣವಾಗಿದ್ದು, ಮಳೆಯ ಪ್ರಮಾಣ ವಾರ್ಷಿಕ ಸರಾಸರಿಗಿಂತ ಕಡಿಮೆಯಾಗಿರುವುದರಿಂದ, ಕಾಳು ಕಟ್ಟುವ ಸಂದರ್ಭದಲ್ಲಿ ಮಣ್ಣಿನ ತೇವಾಂಶ ಕಡಿಮೆ ಇರುವುದರಿಂದ ಮತ್ತು ಕೆರೆ-ಕುಂಟೆಗಳಲ್ಲಿ ನೀರು, ಹರಿಯುವ ನೀರು, ಅಂತರ್ಜಲದ ನೀರಿನ ಮಟ್ಟ ಕಡಿಮೆಯಾಗುವುದರಿಂದ ಸಂಭವಿಸಬಹುದಾಗಿದೆ.

ಇದು ಜಾನುವಾರು ಮತ್ತು ಜನರ ಆಹಾರ ಭದ್ರತೆಯ ಮೇಲೆ ಹಾಗೂ ರೈತರ ಆರ್ಥಿಕ ಮೂಲದ ಮೇಲೆ ನೇರ ಪರಿಣಾಮ ಬೀರುವುದರಿಂದ ಬರದ ನಿರ್ವಹಣೆ ಅತಿ ಮುಖ್ಯದ್ದಾಗಿದೆ.

ಒಣಹವೆ ಮತ್ತು ಮೇವಿನ ಕೊರತೆಯಿಂದಾಗಿ  ಜಾನುವಾರುಗಳ ಹಾಲು, ಮಾಂಸ, ಮೊಟ್ಟೆ ಮತ್ತು ಉಣ್ಣೆ ಉತ್ಪಾದನೆಯಲ್ಲಿ ಕುಂಠಿತವಾಗುವುದು. ಕಲುಷಿತ ನೀರು, ಪೋಷಕಾಂಶಗಳ ಕೊರತೆಯಿಂದ ರೋಗನಿರೋಧಕ ಶಕ್ತಿ ಕುಂದುವುದರೊಂದಿಗೆ ರೋಗಗಳ ಉಲ್ಬಣದಿಂದಾಗಿ ಜಾನುವಾರುಗಳ ಸಾವು ಸಂಭವಿಸಬಹುದು.

ಅಸಂಪ್ರದಾಯಕ ಮೇವಿನ ಸೇವನೆಯಿಂದ Nitrate, Cyanide (Prussic acid) ವಿಷಭಾದೆಯಿಂದ ಸಾವು ಸಂಭವಿಸುತ್ತದೆ. ಗರ್ಭಧರಿಸಿದ ಜಾನುವಾರುಗಳಲ್ಲಿ ಗರ್ಭಪಾತದೊಂದಿಗೆ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಈ ಕಾರಣಗಳಿಂದ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರೈತರ ಆಹಾರ ಮತ್ತು ಆರ್ಥಿಕ ಭದ್ರತೆಗೆ ಧಕ್ಕೆಯಾಗುತ್ತದೆ.

*ಬರ ನಿರ್ವಹಣೆಯಲ್ಲಿ ಪ್ರಮುಖವಾಗಿ ಕೈಗೊಳ್ಳಬೇಕಾದ ಕ್ರಮಗಳು*

ಲಭ್ಯವಿರುವ ಹಸಿರು ಮೇವನ್ನು ಒಣಗಿಸಿ ಹುಲ್ಲನ್ನು (Hay) ಮತ್ತು ರಸಮೇವಿನ (Sailage) ರೂಪದಲ್ಲಿ ಸಂಗ್ರಹಿಸಬೇಕು. ಮೇವು ಕತ್ತರಿಸುವ ಯಂತ್ರವನ್ನು ಉಪಯೋಗಿಸಿ ಮೇವು ಪೋಲಾಗದಂತೆ ನೋಡಿಕೊಳ್ಳಬೇಕು. ಕೃಷಿ ತ್ಯಾಜ್ಯಗಳನ್ನು ಸುಡದೇ ಸಂಗ್ರಹಿಸಿ ಮೇವಾಗಿ ಬಳಸುವುದು.

ಭತ್ತ, ರಾಗಿ  ಕೊಯ್ಲು ಸಂದರ್ಭದಲ್ಲಿ ಬುಡಕ್ಕೆ ಹತ್ತಿರ ಕಟಾವು ಮಾಡಿ ಹುಲ್ಲನ್ನು ಸಂಗ್ರಹಿಸುವುದು. ಸಾಧ್ಯವಾದಷ್ಟು ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು. ಹೆಚ್ಚು ತಾಪಮಾನವಿರುವ ಸಮಯದಲ್ಲಿ ನೀರನ್ನು ಜಾನುವಾರುಗಳ ಮೇಲೆ ಸಿಂಪಡಿಸುವುದು.

ಎಳೆಯ (ಬಲಿಯದ) ಹಸಿಮೇವನ್ನು ನೀಡುವುದರಿಂದ  ವಿಷಬಾಧೆಯಾಗುವುದನ್ನು ತಪ್ಪಿಸಲು 5-6 ದಿನಗಳ ಕಾಲ ಚೆನ್ನಾಗಿ ಒಣಗಿಸಿ ನೀಡುವುದು ಮತ್ತು ಸಂಗ್ರಹಿಸುವುದು. ಅಸಂಪ್ರದಾಯಕ ಮೇವುಗಳಿಂದಾಗಬಹುದಾದ ವಿಷಬಾಧೆಯನ್ನು ತಪ್ಪಿಸಲು ಸ್ಥಳೀಯ ಪಶುವೈದ್ಯರ ಸಲಹೆಯ ಮೇರೆಗೆ 6 ಸಾಂಪ್ರದಾಯಕ ಮೇವುಗಳನ್ನು ಬಳಸುವುದು.

ವಯಸ್ಕ ಹಸು ಮತ್ತು ಎಮ್ಮೆಗಳಿಗೆ 6 ಕೆ.ಜಿ ಒಣಮೇವು (20-30 ಲೀ ನೀರು), ಕುರಿ ಮತ್ತು ಮೇಕೆಗಳಿಗೆ 0.5 ಕೆ.ಜಿ. ಮೇವಿನ (3-5 ಲೀ. ನೀರು) ಸಂಪೂರ್ಣ ಆಹಾರ ನೀಡುವುದು. ಜಾನುವಾರುಗಳಿಗೆ ಆಹಾರ ನೀಡುವ ಪದ್ಧತಿಗಳಲ್ಲಿ ಸುಧಾರಿತ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.

ಹುಲ್ಲು ಮತ್ತು ರಸಮೇವಿನ ರೂಪದಲ್ಲಿ ಮೇವು ಸಂಗ್ರಹಣೆ. ಒಣ ಮೇವಿನ ಯೂರಿಯ ಪೌಷ್ಟಿಕರಣೆ. Urea Mollasess mineral black licker  ಉಪಯೋಗಿಸುವುದು. TMR Blocks ಬಳಕೆ ಮಾಡುವುದು. Azolla & Hydrophonic ಬೆಳೆಯುವುದನ್ನು ರೂಢಿಸಿಕೊಳ್ಳುವುದು. Silvi-pasture & Horti-pasture ಅಳವಡಿಕೆ. ನೀರಾವರಿ ಇರುವ ಪ್ರದೇಶಗಳಲ್ಲಿ ಮೇವಿನ ಬೆಳೆಗಳ ಉತ್ಪಾದನೆ ಮಾಡಬೇಕು.

(ಪ್ರಕಟಣೆ: ಉಪ ನಿರ್ದೇಶಕರು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ)

Leave a Reply

Your email address will not be published. Required fields are marked *