ಬಮೂಲ್ ಹಾಗೂ ಕೆಎಂಎಫ್ ನಿಂದ ಪ್ರತಿ ಲೀಟರ್ ಹಾಲಿಗೆ 2.ರೂ. ದರ ಕಡಿತ: ರೈತರ ಆಕ್ರೋಶ

ದೊಡ್ಡಬಳ್ಳಾಪುರ: ರೈತರಿಂದ ಖರೀದಿಸುವ ಹಾಲಿನ ದರದ ಕಡಿತಗೊಳಿಸುವ ನಿರ್ಧಾರ ಕೈಗೊಂಡ ಬಮೂಲ್ ಹಾಗೂ ಕೆಎಂಎಫ್ ವಿರುದ್ಧ ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮಳೆ ಅಭಾವ, ಬರಗಾಲದ ಹಿನ್ನೆಲೆ ರೈತರು ಈಗಾಗಲೇ ಸಂಕಷ್ಟ ಅನುಭವಿಸುತ್ತಿದ್ದು ಹಾಲಿನ ದರ ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರತಿ ಲೀಟರ್ ಹಾಲಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದ್ದರೂ ಏಕಪಕ್ಷೀಯವಾಗಿ ಬಮೂಲ್ ಮತ್ತು ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ 2.ರೂ. ದರ ಕಡಿತಕ್ಕೆ ಮುಂದಾಗಿದ್ದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.

ರಾಜ್ಯಾದ್ಯಂತ ಬರಗಾಲವಿದ್ದು ದನಕರುಗಳಿಗೆ ಮೇವು ಕೂಡ ಸಿಗುತ್ತಿಲ್ಲ, ಚರ್ಮ ಗಂಟು ರೋಗ ಕೂಡ ಸಾಕಷ್ಟು ಹಾನಿ ಮಾಡಿದ ರೈತರು ಖರ್ಚು ತೂಗಿಸುವುದರಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ ಹೀಗಿರುವಾಗ ದರ ಕಡಿತ ಸರಿಯಲ್ಲ ಎಂದು ರೈತ ಸಂಘದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ತಾಲ್ಲೂಕು ಕಾರ್ಯದರ್ಶಿ ಆರ್.ಸತೀಶ್,ಮುಖಂಡರಾದ ಮುತ್ತೇಗೌಡ, ಮುನಿನಾರಾಯಪ್ಪ, ಶಿರವಾರರವಿ,ಕಾಂತಪ್ಪ, ನಾರಾಯಣಪ್ಪ ಇದ್ದರು.

Leave a Reply

Your email address will not be published. Required fields are marked *