ಬಮೂಲ್ ನಿರ್ದೇಶಕರ ಚುನಾವಣೆಗೆ ದೊಡ್ಡಬಳ್ಳಾಪುರದಲ್ಲಿ ತೆರೆಮರೆಯಲ್ಲಿ ಆಯಾ ಪಕ್ಷಗಳಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಬಿಜೆಪಿಯಿಂದ ಹಾಲಿ ನಿರ್ದೇಶಕ ಬಿ.ಸಿ ಆನಂದ್, ಜೆಡಿಎಸ್ ನಿಂದ ಹುಸ್ಕೂರು ಆನಂದ್, ಕಾಂಗ್ರೆಸ್ ನಿಂದ ಮಾಜಿ ಎಂಎಲ್ಎ ಟಿ.ವೆಂಕಟರಮಣಯ್ಯ ಸಹೋದರ ರಾಮಣ್ಣ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಗುಸುಗುಸು ಚರ್ಚೆಯಾಗುತ್ತಿದೆ.
ಎಂಪಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಾಗಿತ್ತು. ಇದೀಗ ಬಮೂಲ್ ನಿರ್ದೇಶಕರ ಚುನಾವಣೆಗೆ ದೊಡ್ಡಬಳ್ಳಾಪುರದಲ್ಲಿ ಮೈತ್ರಿ ಮರೆತು ಜೆಡಿಎಸ್ ನಿಂದ ಹುಸ್ಕೂರು ಆನಂದ್ ಹಾಗೂ ಬಿಜೆಪಿಯಿಂದ ಬಿ.ಸಿ ಆನಂದ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆ ಶಾಸಕ ಧೀರಜ್ ಮುನಿರಾಜ್ ಅವರ ನಿಲುವು ಯಾರ ಪರ ಇದೆ…? ಎಂಬ ಪ್ರಶ್ನೆಗೆ ಶಾಸಕರೇ ಉತ್ತರಿಸಿದ್ದಾರೆ, ಹುಸ್ಕೂರು ಆನಂದ್ ಅವರು ಯಾರು ಅಂತಾ ಗೊತ್ತಿಲ್ಲ, ಅವರು ವಾರದ ಹಿಂದೆ ಹಾಲಿನ ಡೈರಿ ಅಧ್ಯಕ್ಷ್ಯರಾದರು ಎಂದು ಮೂರನೇ ವ್ಯಕ್ತಿಯಿಂದ ಗೊತ್ತಾಗಿದೆ. ಬಿಸಿ ಆನಂದಣ್ಣ ನನಗೆ ಎಂಎಲ್ಎ ಎಲೆಕ್ಷನ್ ನಿಂದ ಪರಿಚಯ, ಎಂಎಲ್ಎ ಹಾಗೂ ಎಂಪಿ ಚುನಾವಣೆ ಗೆಲ್ಲಲು ಅವರು ನಮಗೆ ಸಹಕರಿಸಿದ್ದಾರೆ. ಆದ್ದರಿಂದ ನಾವು ಅವರ ಪರ ಇರುತ್ತೇವೆ. ನಮ್ಮ ಕೈಲಾದಷ್ಟು ಸಹಕಾರ ನೀಡುತ್ತೇವೆ. ಇದರಲ್ಲಿ ಏನು ತಪ್ಪಿದೆ ಎಂದು ಹೇಳಿದ್ದಾರೆ.
ಆದರೆ, ಎಂಎಲ್ಎ ಹಾಗೂ ಎಂಪಿ ಚುನಾವಣೆ ಆದ ನಂತರ ಹುಸ್ಕೂರು ಆನಂದ್ ಅವರನ್ನ ಒಂದು ಎರೆಡು ಬಾರಿ ಭೇಟಿ ಆಗಿರಬಹುದು ಅಷ್ಟೇ, ಅವರಿಗೂ ನನಗೂ ಅಷ್ಟೋಂದು ಆತ್ಮಿಯತೆ ಇಲ್ಲ. ಡೈರಿ ನಿರ್ದೇಶಕ ಬಿ.ಸಿ.ಆನಂದಣ್ಣ ನಮ್ಮ ಪಾರ್ಟಿಗೆ ಬಂದು ಸೇರಿದ್ದಾರೆ. ಬಮೂಲ್ ಚುನಾವಣೆಯ ಲೆಕ್ಕಾಚಾರವನ್ನು ವರಿಷ್ಠರು ಮಾಡಲಿದ್ದಾರೆ. ನಾನು ಕೇವಲ ಒಬ್ಬ ಸಾಮಾನ್ಯ ಶಾಸಕ ಮಾತ್ರ, ನನ್ನ ಪರವಾಗಿ, ಪಾರ್ಟಿ ಪರವಾಗಿ ಕೆಲಸ ಮಾಡಿದವರ ಜೊತೆ ನಿಂತು ಅವರ ಪರ ಕೆಲಸ ಮಾಡುತ್ತೇನೆ. ನಾನು ಯಾರ ನಡುವೆಯೂ ಅಂತರ ಕಾಯ್ದುಕೊಂಡಿಲ್ಲ. ನಮ್ಮ ಬಳಿಯೇ ಡೈರಿ ನಿರ್ದೇಶಕರು ಇದ್ದಾಗ ನಾವು ಬೇರೆಯವರ ಬಳಿ ನಾವು ಏಕೆ ಹೋಗಬೇಕು, ನನಗೆ ಅಂತಾ ಕೆಟ್ಟು ಬುದ್ದಿ ಇಲ್ಲ. ಬಿ.ಸಿ.ಆನಂದ್ ಅವರ ಬಗ್ಗೆ ಜನರಲ್ಲಿ ಒಳ್ಳೆ ಅಭಿಪ್ರಾಯವಿದೆ. ಅವರನ್ನು ಗೆಲ್ಲಿಸಿಕೊಂಡು ಬಂದೇ ಬರುತ್ತೇವೆ ಎಂದು ಹೇಳಿದರು.